ರಾಮೇಶ್ವರಂನಲ್ಲಿ ಪವಾಡ: ಸಮುದ್ರದ ಮೇಲೆ ಬಸ್ಸಿನ ಎರಡೂ ಚಕ್ರ ನೇತಾಡುತ್ತಿದ್ದರೂ ಯಾತ್ರಿಗಳು ಪಾರಾದ್ರು ವಿಡಿಯೋ ನೋಡಿ

ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂ ಸಮುದ್ರದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದು ತಪ್ಪಿದ್ದು, ಮಿನಿ ಬಸ್ಸಿನಲ್ಲಿದ್ದ ಯಾತ್ರಿಗಳೆಲ್ಲರೂ ಪಾರಾಗಿದ್ದಾರೆ.

ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ್ದ ಬಸ್ ಪಂಬನ್ ರಸ್ತೆಯ ಸಮುದ್ರ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದ್ದಾಗ ಬಸ್ಸಿನ ಎಡಗಡೆಯ ಚಕ್ರಕ್ಕೆ ತಡೆಗೋಡೆ ಅಡ್ಡವಾಗಿ ಸಿಕ್ಕಿದ್ದ ಕಾರಣ ಅಲ್ಲೆ ನಿಂತಿದ್ದು, ಬಸ್‍ನಲ್ಲಿದ್ದ 12 ಮಂದಿ ಯಾತ್ರಿಗಳು ಪಾರಾಗಿದ್ದಾರೆ. ನಿಂತ ಬಳಿಕ ಯಾತ್ರಿಗಳು ಒಬ್ಬೊಬ್ಬರಾಗಿ ಇಳಿದಿದ್ದಾರೆ.

ಇಂದು ಬೆಳಗ್ಗೆ ರಾಮೇಶ್ವರಂ ನಲ್ಲಿ ತುಂತುರು ಮಳೆ ಇತ್ತು. ಬಸ್ ಒಂದರ ಹಿಂದೆ ಮಿನಿ ಬಸ್ ಸಂಚರಿಸುತಿತ್ತು. ಬಸ್ ನಿಂತಾಗ ಮಿನಿ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಮಿನಿ ಬಸ್ ಸ್ಕಿಡ್ ಆಗಿ ತಡೆಗೋಡೆಗೆ ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‍ನ ಮುಂದುಗಡೆಯ ಎರಡೂ ಚಕ್ರ ಸೇತುವೆಯ ಮೇಲೆ ನೇತಾಡಿ ನಿಂತುಕೊಂಡು, ಪ್ರಯಾಣಿಕರೆಲ್ಲರೂ ಪಾರಾಗಿದ್ದು ನಿಜಕ್ಕೂ ಒಂದು ದೊಡ್ಡ ಪವಾಡ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

https://www.youtube.com/watch?v=LiQkZ3l_YVQ

Comments

Leave a Reply

Your email address will not be published. Required fields are marked *