RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

rrr - kgf

ಡೀ ಭಾರತೀಯ ಚಿತ್ರರಂಗ ಕಾಯುತ್ತಿರುವ ಸಿನಿಮಾಗಳಲ್ಲಿ RRR ಮತ್ತು ಕೆಜಿಎಫ್ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಎರಡು ಸಿನಿಮಾ ನೋಡಬೇಕೆಂದು ಸಿನಿರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ನಾಳೆಯೇ RRR ರಿಲೀಸ್ ಆಗಬೇಕಿರುವ ವೇಳೆಯೇ ಕರ್ನಾಟಕದಲ್ಲಿ ವಿರೋಧ ಎದುರಾಗುತ್ತಿದ್ದು, ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಕೆಜಿಎಫ್ ಸಿನಿಮಾಗೂ ಸಂಕಟ ಪ್ರಾರಂಭವಾಗಿದೆ.

RRR ಸಿನಿಮಾ ರಿಲೀಸ್‍ಗೆ ಮಾಡುವುದಾಗಿ ಹೇಳಿದಾಗಿನಿಂದ ಒಂದಲ್ಲ ಒಂದು ವಿವಾದ ಬರುತ್ತಿದೆ. ಈ ಬೆನ್ನಲ್ಲೇ ಸಿನಿಮಾ ರಿಲೀಸ್‍ಗೆ ಕ್ಷಣಗಣನೇ ಪ್ರಾರಂಭವಾಗುತ್ತಿರುವ ಸಮಯದಲ್ಲಿ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

ಬೇರೆ ಭಾಷೆಗಳ ಸಿನಿಮಾಗೆ ಅವಕಾಶಕೊಡಲು ನಮ್ಮ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಂದ ತೆಗೆದುಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಹೆಸರಿನಲ್ಲಿ ಕನ್ನಡ ಸಿನಿಮಾಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ RRR ಸಿನಿಮಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಬಾಯ್‍ಕಾಟ್ ಆಭಿಯಾನ ಪ್ರಾರಂಭ ಮಾಡಿದ್ದಾರೆ. ಕರ್ನಾಟಕದಲ್ಲಿ RRR ರಿಲೀಸ್ ಆಗುವುದು ಬೇಡ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಪರಿಣಾಮ RRR ಆಭಿಮಾನಿಗಳು, ಒಂದು ವೇಳೆ RRR ಸಿನಿಮಾಗೆ ಕರ್ನಾಟಕದಲ್ಲಿ ತೊಂದರೆ ಕೊಟ್ಟರೆ ಕೆಜಿಎಫ್ ಬ್ಯಾನ್ ಮಾಡಬೇಕಾಗುತ್ತೆ ಹುಷಾರ್ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ರೋಚಿಗೆದ್ದ RRR ಫಾನ್ಸ್
RRR ಫ್ಯಾನ್ಸ್‌ಗೆ ಬಾಯ್‍ಕಾಟ್ ವಿಚಾರ ತಿಳಿದು ಆಕ್ರೋಶಗೊಂಡಿದ್ದಾರೆ. ಈ ಕುರಿತು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ, ಒಂದು ವೇಳೆ ‘RRR’ ಸಿನಿಮಾ ನೀವು ಬ್ಯಾನ್ ಮಾಡಿದ್ದೇ ಆದಲ್ಲಿ, ‘ಕೆಜಿಎಫ್ 2’ ರಿಲೀಸ್ ಹತ್ತಿರದಲ್ಲೇ ಇದೆ ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ‘RRR’ ಕನ್ನಡ ವರ್ಷನ್‍ನಲ್ಲಿ ರಿಲೀಸ್ ಆಗುತ್ತಿಲ್ಲ ಅನ್ನೋದು ಚಿತ್ರತಂಡದ ಸಮಸ್ಯೆ ಅಲ್ಲ. ನೀವು ಈ ಸಮಸ್ಯೆಯನ್ನು ಚಿತ್ರತಂಡಕ್ಕೆ ಪ್ರಶ್ನೆ ಮಾಡುವುದು ಸರಿಯಲ್ಲ. ನಿಮ್ಮ ರಾಜ್ಯದ ಡಿಸ್ಟ್ರಿಬ್ಯೂಟರ್ ಜೊತೆ ಮಾತನಾಡಿ ಈ ಸಮಸ್ಯೆ ಬಗ್ಗೆ ಬಗೆಹರಿಸಿಕೊಳ್ಳಿ. ಅದು ಬಿಟ್ಟು ‘RRR’ ಸಿನಿಮಾಗೆ ತೊಂದರೆ ಮಾಡಬೇಡಿ. ಹಾಗೇನಾದರೂ ಆದರೆ, ‘ಕೆಜಿಎಫ್ 2’ ಸಿನಿಮಾಗೆ ನೀವು ಮಾಡಿದ ದುಪ್ಪಟ್ಟು ಡ್ಯಾಮೇಜ್ ಅನ್ನು ನಾವು ‘ಕೆಜಿಎಫ್ 2’ಗೆ ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ʼಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

RRR ಸಿನಿಮಾ ಬಂದ್ರೆ ‘ಜೇಮ್ಸ್’ ಸಿನಿಮಾ ಎತ್ತಂಗಡಿ ಮಾಡುತ್ತಾರೆ ಎಂದು ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆ ‘RRR’ ಸಿನಿಮಾ ಬಾಯ್‍ಕಾಟ್ ಎಂಬ ಹೋರಾಟ ನಡೆಯುತ್ತಿದೆ. ಇದೀಗ ಈ ದ್ವೇಷದ ಕಿಡಿ ‘ಕೆಜಿಎಫ್ 2’ ಸಿನಿಮಾ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.

Comments

Leave a Reply

Your email address will not be published. Required fields are marked *