‘ತೋತಾಪುರಿ’ ಟ್ರೇಲರ್ ಕಮಾಲ್: ಕಾಶ್ಮೀರಿ ಫೈಲ್ಸ್‌ಗಿಂತ ಕಮ್ಮಿಯಿಲ್ಲ ನಮ್ ದೇಸಿ ಫೈಲ್ಸ್

Totapuri

ವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಶನ್‌ನಲ್ಲಿ ಬರ್ತಿರುವ ಹೈವೋಲ್ಟೇಜ್ ಚಿತ್ರ ‘ತೋತಾಪುರಿ’. ಈಗಾಗಲೇ ‘ತೋತಾಪುರಿ’ ಅಂಗಳದಿಂದ ಬಂದಿರುವ ʻಬಾಗ್ಲು ತೆಗಿ ಮೇರಿ ಜಾನ್ʼ ಹಾಡು ದೊಡ್ಡ ಮಟ್ಟದಲ್ಲಿ ದೇಶ ವಿದೇಶಗಳಲ್ಲೂ ವೈರಲ್ ಆಗಿರೋದನ್ನು ಬಿಡಿಸಿ ಹೇಳಬೇಕಿಲ್ಲ. ತೋತಾಪುರಿಯ ಬಝ್ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಪೀಕ್ ಲೆವೆಲ್‌ನಲ್ಲಿದೆ. ಇದೀಗ ಬಿಡುಗಡೆಯಾಗಿರುವ ಟ್ರೇಲರ್ ಆ ಬಝ್ ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ದಿದೆ. ಯೂಟ್ಯೂಬ್‌ನಲ್ಲೂ ಮಿಲಿಯನ್‌ಗಟ್ಟಲೆ ವೀವ್ಸ್ ತನ್ನದಾಗಿಸಿಕೊಂಡಿದೆ.

ಎಸ್.. ‘ತೋತಾಪುರಿ’ ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ಅವರಿಂದ ಅನಾವರಣವಾಗಿದೆ. ತೋತಾಪುರಿಯ ಕಲರ್‌ಫುಲ್ ಪ್ರಪಂಚ ತೆರೆದುಕೊಂಡಿದೆ. ಸೆಂಟಿಮೆಂಟ್, ಡಬಲ್ ಮೀನಿಂಗ್ ಡೈಲಾಗ್, ಫಿಲಾಸಫಿ, ಕ್ಯೂರಿಯಾಸಿಟಿ ಒಳಗೊಂಡ ಟ್ರೇಲರ್ ಸಿನಿಮಾ ಬೇರೆಯದ್ದೇನನ್ನೋ ಹೇಳಹೊರಟಿದೆ ಅನ್ನೋದನ್ನು ಕೂಡ ಮನದಟ್ಟು ಮಾಡಿದೆ. ವಿಜಯಪ್ರಸಾದ್ ಸಿನಿಮಾ ಅಂದ್ರೆ ಅಲ್ಲಿ ಸಂಭಾಷಣೆಗಳದ್ದೇ ಕಾರುಬಾರು. ಅದು ಇಲ್ಲೂ ಮುಂದುವರಿದಿದೆ. ರಿಯಲ್ ತೋತಾಪುರಿಯಲ್ಲಿ ಸಿಗೋ ರುಚಿ ಹಾಗೆ ಸಿನಿಮಾದಲ್ಲೂ ಯಾವ ಎಲಿಮೆಂಟ್‌ಗಳಿಗೂ ಬರವಿಲ್ಲ ಅನ್ನೋದು ಟ್ರೇಲರ್ ತುಣುಕು ಕನ್ಫರ್ಮ್ ಮಾಡಿದೆ. ಪ್ರತಿ ಪಾತ್ರಗಳು ಹೊಸ ಅವತಾರ ತಾಳಿದ್ದು, ಹಂಡ್ರೆಡ್ ಪರ್ಸೆಂಟ್ ಎಂಟಟೈನ್ಮೆಂಟ್‌ಗೇನು ಮೋಸ ಇಲ್ಲ ಅನ್ನೋದು ಟ್ರೇಲರ್ ನೋಡಿದವರ ಕಾಮನ್ ಟಾಕ್. ಇದನ್ನೂ ಓದಿ: `ಕೆಜಿಎಫ್ 2′ ಮುಂದೆ ನಡೆಯಲಿಲ್ಲ `ಜೆರ್ಸಿ’ ಅಬ್ಬರ: ಶಾಹಿದ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಕೇವಲ ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯ ಅಷ್ಟೇ ಏಕೆ ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಲಂಡನ್, ಉಗಾಂಡ, ಫಿಲಿಪೈನ್ಸ್ ಸೇರಿದಂತೆ ಹಲವು ದೇಶಗಳಲ್ಲಿರುವ ಅಭಿಮಾನಿಗಳು ಟ್ರೇಲರ್ ನೋಡಿ ಇದು ದೇಸಿ ಫೈಲ್ಸ್ ಎಂದು ಗುಣಗಾನ ಮಾಡ್ತಿದ್ದಾರೆ. ಅಷ್ಟರಮಟ್ಟಿಗೆ ಟ್ರೇಲರ್ ಎಲ್ಲರಿಗೂ ಹಿಡಿಸಿಬಿಟ್ಟಿದೆ. ಅದಕ್ಕೆ ಸಾಕ್ಷಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೇಲರ್ ಎರಡು ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿರೋದು.

ಸುರೇಶ್ ಆರ್ಟ್ಸ್ ಮತ್ತು ಮೋನಿಪ್ಲಿಕ್ಸ್ ಆಡಿಯೋಸ್ ಬ್ಯಾನರ್‌ನಡಿ ಕೆ.ಎ.ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎರಡು ಭಾಗವಾಗಿ ತೆರೆ ಕಾಣುತ್ತಿರುವ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕ ನಟಿಯಾಗಿ ಮಿಂಚಿದ್ದಾರೆ. ದತ್ತಣ್ಣ, ಸುಮನ ರಂಗನಾಥ್, ಡಾಲಿ ಧನಂಜಯ್, ವೀಣಾ ಸುಂದರ್, ಹೇಮಾದತ್ ಒಳಗೊಂಡ ದೊಡ್ಡ ತಾರಾ ಬಳಗವಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ವರ್ಕ್, ಸುರೇಶ್ ಅರಸ್ ಸಂಕಲನವಿದೆ. ಇದನ್ನೂ ಓದಿ: ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

Comments

Leave a Reply

Your email address will not be published. Required fields are marked *