ಮಲತಾಯಿ ಕಾಟದಿಂದ ಬೇಸತ್ತ ಯುವತಿ ಬೆತ್ತಲೆಯಾಗಿ ಬೀದಿಯಲ್ಲಿ ಅಲೆದಾಟ!

ಲಖ್ನೌ: ಮಲತಾಯಿ ಕಾಟದಿಂದ ಬೇಸತ್ತು ಯುವತಿಯೊಬ್ಬಳು ಬೆತ್ತಲೆಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಘಟನೆ ಲಕ್ನೋದಲ್ಲಿ ನಡೆದಿದೆ.

ಯುವತಿ ಬೆತ್ತಲೆಯಾಗಿ ಅಲೆದಾಡುತ್ತಿರುವುದನ್ನು ನೋಡಿ ಆಟೋ ಚಾಲಕನೊಬ್ಬ ಆಕೆಯನ್ನು ಕೆಟ್ಟ ಉದ್ದೇಶದಿಂದ ಕರೆದುಕೊಂಡು ಹೋಗುತ್ತಿದ್ದನು. ಆಟೋ ಚಾಲಕ ಪೊಲೀಸರನ್ನು ನೋಡಿದ ತಕ್ಷಣ ತನ್ನ ಆಟೋ ಹಾಗೂ ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ಸಮಾಜ ಸೇವೆ ಮಾಡೋ ಆರಾಧನಾ ಸಿಂಗ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ, ಯುವತಿಯನ್ನು ರಕ್ಷಿಸಿದ್ದಾರೆ.

ನನಗೆ ಪತ್ರಕರ್ತರೊಬ್ಬರು ಕರೆ ಮಾಡಿ, ಹಜಾರಾತ್‍ನ ಅಲಹಾಬಾದ್ ನ ಬೀದಿಯಲ್ಲಿ ಯುವತಿಯೊಬ್ಬಳು ಬೆತ್ತಲೆಯಾಗಿ ತಿರುಗುತ್ತಿದ್ದಾಳೆ. ಚಳಿಯಿರೋ ಕಾರಣ ಯುವತಿಗೆ ಯಾರೊಬ್ಬರು ಬೆಡ್‍ಶೀಟ್ ಕೊಟ್ಟಿದ್ದರು. ಬೇಡ್ ಶೀಟ್ ಬಿಟ್ಟರೆ ಯುವತಿಯ ಮೈಮೇಲೆ ಬೇರೆ ಯಾವುದೇ ಬಟ್ಟೆ ಇರಲಿಲ್ಲ ಎಂದು ತಿಳಿಸಿದ್ದರು ಎಂದು ಆರಾಧನಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಆಟೋ ಚಾಲಕ ಯುವತಿಯನ್ನು ಕೆಟ್ಟ ಉದ್ದೇಶ ಎಂದರೆ ಆಕೆಯ ಮೇಲೆ ಅತ್ಯಾಚಾರ ಮಾಡಲು ಕರೆದುಕೊಂಡು ಹೋಗುತ್ತಿದ್ದನು. ನಂತರ ಪೊಲೀಸರನ್ನು ನೋಡಿ ಯುವತಿ ಹಾಗೂ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಪತ್ರಕರ್ತ ವಿವರಿಸಿದ್ರು. ಕೂಡಲೇ ನಾ ಸ್ಥಳಕ್ಕೆ ಭೇಟಿ ನೀಡಿ 20 ವರ್ಷದ ಯುವತಿಯನ್ನು ಮದರ್ ತೆರೇಸಾ ಮನೆಗೆ ಕರೆದುಕೊಂಡು ಹೋಗಿರುವುದಾಗಿ ಅವರು ಹೇಳಿದ್ರು.

ಮಲತಾಯಿಯ ಕಿರುಕುಳದಿಂದ ಬೇಸತ್ತು ಯುವತಿ ಈ ರೀತಿ ಅಲೆದಾಟ ಮಾಡುತ್ತಿದ್ದಳು ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *