ಎಟಿಎಂನಲ್ಲಿ ಹರಿದ, ಮಸಿ ಹತ್ತಿದ 2 ಸಾವಿರ ನೋಟುಗಳು ಪತ್ತೆ

ಮಂಡ್ಯ: ಹರಿದ ಮತ್ತು ಮಸಿ ಹತ್ತಿದ 2 ಸಾವಿರ ರೂ ಮುಖ ಬೆಲೆಯ ನೋಟುಗಳು ಎಟಿಎಂನಲ್ಲಿ ಪತ್ತೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ವಿಜಯಾ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ನಡೆದಿದ್ದು, ಹಣ ಡ್ರಾ ಮಾಡಿದಾಗ 200ರೂ. ಮುಖಬೆಲೆಯ ಹರಿದ ಹಾಗೂ ನೀಲಿ ಮಸಿ ಹತ್ತಿದ ನೋಟುಗಳು ಪತ್ತೆಯಾಗಿವೆ. ಇನ್ನು ಗ್ರಾಹಕರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಲೇ ಹಣ ಡ್ರಾ ಮಾಡಿದ್ದಾರೆ.

ಗ್ರಾಹಕರಾದ ಸುನಿಲ್ ಹಾಗೂ ಭರತ್ ಎಂಬವರು ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಹರಿದ ನೋಟುಗಳನ್ನು ನೋಡಿ ಇಬ್ಬರು ಕಕ್ಕಾ ಬಿಕ್ಕಿಯಾಗಿದ್ದಾರೆ. ನೋಟ್ ಬದಲಿಸಿಕೊಡುವಂತೆ ಬ್ಯಾಂಕ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಗ್ರಾಹಕರಾದ ಸುನಿಲ್ ಹಾಗೂ ಭರತ್ ನೋಟ್ ಬದಲಿಸಿಕೊಡುವಂತೆ ಬ್ಯಾಂಕ್ ಸಿಬ್ಬಂದಿಯ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಸಿಬ್ಬಂದಿ ನೀವು ನಮ್ಮ ಬ್ಯಾಂಕ್‍ನ ಎಟಿಎಂ ನಿಂದ ಹಣ ಡ್ರಾ ಮಾಡಿದ್ದರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಅದನ್ನ ಪರಿಶೀಲನೆ ಮಾಡಿ ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ನಂತರ ಹಣ ಬದಲಾವಣೆ ಮಾಡಿಕೊಡುತ್ತೇವೆ. ಅಲ್ಲದೇ ಈಗ ಬ್ಯಾಂಕ್ ನಲ್ಲಿ ಹಣ ಇಲ್ಲ ಎಂದು ಸಿಬ್ಬಂದಿ ಗ್ರಾಹಕರ ಮನಸನ್ನು ಒಲಿಸಲು ಮುಂದಾಗಿದ್ದಾರೆ.

ಈ ಎಲ್ಲಾ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತರಿಗೂ ಬ್ಯಾಂಕ್ ಸಿಬ್ಬಂದಿ ಆವಾಜ್ ಹಾಕಿದ್ದಾರೆ. ಅಲ್ಲದೇ ಸ್ಥಳೀಯ ಪತ್ರಕರ್ತರೊಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ.

ಗ್ರಾಹರು ನಾವು ನಿಮ್ಮ ಜೊತೆ ಜಗಳಕ್ಕೆ ಬಂದಿಲ್ಲ. ನಮ್ಮ ಹಣವನ್ನು ನಮಗೆ ಬದಲಿಸಿ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *