ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

ತೆಲುಗು ಸಿನಿಮಾ ರಂಗದ ಲೆಜೆಂಡ್ ನಟ ಬಾಲಕೃಷ್ಣ ಅವರ ಹುಟ್ಟು ಹಬ್ಬಕ್ಕಾಗಿ ಇವರ ನಟನೆಯ 107ನೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಹೇಳಿ ಕೇಳಿ ಬಾಲಕೃಷ್ಣ ಮಾಸ್ ಹೀರೋ, ಟೀಸರ್ ಕೂಡ ಅಷ್ಟೇ ಮಾಸ್ ಆಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ನಲ್ಲಿ ಹೊಡೆದ ಡೈಲಾಗ್ ಇದೀಗ ಟಾಲಿವುಡ್ ನಲ್ಲಿ ವೈರಲ್ ಆಗಿದೆ.

107ನೇ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆದಿದ್ದು, ನಿರ್ದೇಶಕ ಗೋಪಿಚಂದ್ ಮಲಿನೇನಿ ವಿಶೇಷವಾಗಿ ಟೀಸರ್ ರೆಡಿ ಮಾಡಿದ್ದು, ಬಾಲಕೃಷ್ಣ ಸಾಲ್ಟ್ ಅಂಡ್ ಪೇಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಲುಕ್ ನಲ್ಲಿ ಕ್ಲಾಸ್ ಡೈಲಾಗ್ ಹೊಡೆದಿದ್ದಾರೆ. ಅದರಲ್ಲೂ ಈ ಟೀಸರ್ ನಲ್ಲಿ ಅಲ್ಲಿನ ಸರಕಾರಕ್ಕೆ ಟಾಂಗ್ ಕೊಟ್ಟಿದ್ದು, ಆ ಡೈಲಾಗ್ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

ಈ ಟೀಸರ್ ನಲ್ಲಿ ಬಾಲಯ್ಯ ‘ನಿಮಗೆಲ್ಲ ಗೌರ್ಮೆಂಟ್ ಆರ್ಡರ್.. ನನಗೆ ದೇವರ ಆರ್ಡರ್’ ಎಂದು ಹೇಳುವ ಡೈಲಾಗ್ ಇದೀಗ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದ್ದು, ಇದು ನಿಜವಾಗಿಯೂ ಬಾಲಯ್ಯ ಸರಕಾರಕ್ಕೆ ಕೊಟ್ಟಿರುವ ಟಾಂಗ್? ಎನ್ನುವ ಪ್ರಶ್ನೆಯನ್ನೂ ಅದು ಹುಟ್ಟು ಹಾಕಿದೆ. ಅಲ್ಲದೇ, ಅವರು ಯಾಕೆ ಸರಕಾರಕ್ಕೆ ಈ ರೀತಿ ಟಾಂಗ್ ಕೊಟ್ಟರು ಎನ್ನುವ ಚರ್ಚೆಯನ್ನೂ ಅದು ಹುಟ್ಟು ಹಾಕಿದೆ.

ಬಾಲಕೃಷ್ಣ ಸಿನಿಮಾದಲ್ಲಿ ಕನ್ನಡದ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದು, ಎರಡು ಹಂತದ ಶೂಟಿಂಗ್ ಕೂಡ ಅವರು ಮುಗಿಸಿ ಬಂದಿದ್ದಾರೆ. ಈ ಬಾರಿಯ ಹುಟ್ಟು ಹಬ್ಬಕ್ಕೆ ದುನಿಯಾ ವಿಜಯ್, ವಿಶ್ ಮಾಡಿದ್ದಾರೆ. ನಟಸಿಂಹ ಎಂದು ಬಿರುದು ಕೂಡ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *