ನಾಳೆ ವರ್ಷದ ಮೊದಲ ಸೂರ್ಯಗ್ರಹಣ – 30 ರಿಂದ 50 ವರ್ಷಗಳ ಬಳಿಕ ಸಂಭವಿಸಲಿದೆ ಷಡ್ ಗ್ರಹಯೋಗ

ಮಾ.29ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ (Solar Eclipse) ಸಂಭವಿಸಲಿದ್ದು, ಇದರ ಜೊತೆಗೆ 30ರಿಂದ 50 ವರ್ಷಗಳ ಬಳಿಕ ಷಡ್ ಗ್ರಹಯೋಗ ಕೂಡ ಸಂಭವಿಸಲಿದೆ.

ಯುಗಾದಿ (Yugadi) ಮುನ್ನ ದಿನವೇ ವರ್ಷದ ಮೊದಲ ಸೂರ್ಯಗ್ರಹಣವಿರಲಿದ್ದು, ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ. ಅಮೆರಿಕದಲ್ಲಿ ಗೋಚರವಾಗಲಿದೆ. ಆದರೆ ಯುಗಾದಿಗೂ ಮೊದಲು ಸೂರ್ಯ ಗ್ರಹಣವಿರುವುದರಿಂದ ಧಾರ್ಮಿಕವಾಗಿ ಮಹತ್ವ ಪಡೆದುಕೊಳ್ಳಲಿದೆ.ಇದನ್ನೂ ಓದಿ:ಅನೈತಿಕ ಸಂಬಂಧ ಶಂಕೆ – ಕತ್ತಿಯಿಂದ ಹೊಡೆದು ನಾಲ್ವರ ಭೀಕರ ಹತ್ಯೆ

ಇನ್ನೂ ಗ್ರಹಣದೊಂದಿಗೆ 30-50 ವರ್ಷಗಳ ಬಳಿಕ ಸಂಭವಿಸಲಿರುವ ಅಪರೂಪದ ಷಡ್ ಗ್ರಹಯೋಗವೂ ಜೊತೆಯಾಗಲಿದೆ.

ಏನಿದು ಷಡ್ ಗ್ರಹಯೋಗ?
ಈ ಗ್ರಹಯೋಗದಲ್ಲಿ ಆರು ರಾಶಿಗಳು ಒಟ್ಟಿಗೆ ಒಂದೇ ಗ್ರಹದಲ್ಲಿ ಸಮ್ಮಿಲನವಾಗುತ್ತವೆ. ಸಾಮಾನ್ಯವಾಗಿ ಈ ರೀತಿಯ ಷಡ್ ಗ್ರಹಯೋಗದಿಂದ ಕೆಡುಕು ಉಂಟಾಗುವುದು ಹೆಚ್ಚು. ಧಾರ್ಮಿಕವಾಗಿ ಈ ಪ್ರಕ್ರಿಯೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, 12 ರಾಶಿಗಳ ಮೇಲೆಯೂ ಇದರ ಪ್ರಭಾವ ಬೀರಲಿದೆ.

ಪರಿಹಾರ ಏನು.?
ಹೋಮ ಹವನ, ವಿಷ್ಣು ಸಹಸ್ರನಾಮ, ರುದ್ರಪಾರಾಯಣ, ರುದ್ರಾಭಿಷೇಕ, ಮೃತ್ಯುಂಜಯ ಜಪ, ಆಂಜನೇಯ ದೇವರ ಆರಾಧನೆ, ನವಧಾನ್ಯಗಳ ದಾನ ಮಾಡಬೇಕು

ಯಾವ ರಾಶಿಗೆ ಆಪತ್ತು?
– ಕುಂಭರಾಶಿಯಿಂದ ಮೀನ ರಾಶಿಗೆ ಶನಿ ಪ್ರವೇಶ
– ಷಡ್ ಗ್ರಹಯೋಗದಿಂದ 12 ರಾಶಿಯ ಮೇಲೂ ಪರಿಣಾಮ
– ಅದರಲ್ಲಿ ಮೀನ, ಮೇಷ, ಸಿಂಹ, ಧನು ರಾಶಿಯ ಅಧಿಕ ಪರಿಣಾಮ
– ಈ ರಾಶಿಯವರು ತೀರಾ ಎಚ್ಚರಿಕೆಯಿಂದ ಇರಬೇಕು.ಇದನ್ನೂ ಓದಿ:ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ – ಜೀವ ಉಳಿಸಿಕೊಳ್ಳಲು 2ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿಯರು