ನಾಳೆ ಜ್ಯೇಷ್ಠ ಮಾಸದ ಹುಣ್ಣಿಮೆ – ಆಗಸದಲ್ಲಿ ಸೂಪರ್ ಮೂನ್ ದರ್ಶನ

Supermoon

ಉಡುಪಿ: ಜೂನ್ 14 ಜ್ಯೇಷ್ಠ ಮಾಸದ ಹುಣ್ಣಿಮೆ. ಆಗಸದಲ್ಲಿ ಸೂಪರ್ ಮೂನ್ ಗೋಚರವಾಗಲಿದೆ. 28 ದಿನಗಳಿಗೊಮ್ಮೆ ಚಂದ್ರ ಭೂಮಿಯ ಸುತ್ತ ಸುತ್ತುವ ತಿರುಗಾಟದಲ್ಲಿರುವ ಚಂದ್ರ ತನ್ನ ಪರಿಧಿಯಲ್ಲಿ ಭೂಮಿಯ ಸಮೀಪಕ್ಕೆ ಬರಲಿದ್ದಾನೆ.

ಚಂದ್ರ ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿಮೀ ಹತ್ತಿರ ಬರಲಿದ್ದಾನೆ. ಚಂದ್ರ ತನ್ನ ದೀರ್ಘ ವೃತ್ತಾಕಾರದ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಸಮೀಪ ಬರಲಿದ್ದಾನೆ. ಅಲ್ಲದೆ ದೂರದ ಅಪೊಜಿಯಲ್ಲಿ ಹತ್ತಿರ ಬರುವುದು ವಾಡಿಕೆ. ಈ ಪರಿಧಿಗೆ ಬಂದಾಗ ಹುಣ್ಣಿಮೆಯಾದರೆ ಸೂಪರ್ ಚಂದ್ರನ ಗೋಚರವಾಗುತ್ತದೆ. ಇದನ್ನೂ ಓದಿ: ರೆಸ್ಟೋರೆಂಟ್‍ನಲ್ಲಿದ್ದ ಯುವತಿಯರನ್ನು ಧರಧರನೇ ಎಳೆದು ಹಲ್ಲೆ ನಡೆಸಿದ ಗ್ಯಾಂಗ್

ಚಂದ್ರ ನಮಗೆ ಸುಮಾರು 15 ಅಂಶ ಗಾತ್ರದಲ್ಲಿ ದೊಡ್ಡದಾಗಿ 25 ಅಂಶ ಹೆಚ್ಚಿನ ಬೆಳಕಿಂದ ಖುಷಿ ಕೊಡುತ್ತದೆ. ಚಂದ್ರ ಭೂಮಿಯ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಮೀ ಇದ್ದು, ನಾಳೆ 3 ಲಕ್ಷದ 57 ಸಾವಿರ ಕಿಲೋ ಮೀಟರ್ ದೂರದಲ್ಲಿ ಹಾದು ಹೋಗುತ್ತಾನೆ.

ಭಾರತೀಯರ ಮಾಸಗಳ ಕಲ್ಪನೆ ಬಲು ಚಂದ. ಹುಣ್ಣಿಮೆಯ ಚಂದ್ರ ಆ ದಿನ ಯಾವ ನಕ್ಷತ್ರದ ಜೊತೆಗಿರುವನೋ ಆ ನಕ್ಷತ್ರದ ಹೆಸರನ್ನು ಆ ತಿಂಗಳಿಗೆ ನಮ್ಮ ಹಿರಿಯರು ಇಟ್ಟಿದ್ದಾರೆ. ಪೂರ್ವಜರ ಆಕಾಶ ವೀಕ್ಷಣಾ ಪ್ರೌಢ ಜ್ಞಾನವನ್ನು ಮನಗಾಣಬಹುದು. ಜೂನ್ 14 ವೃಶ್ಚಿಕ ರಾಶಿಯ ಸುಂದರ ನಕ್ಷತ್ರ ಜ್ಯೇಷ್ಠ / ಅಂಟಾರಸ್ ನ ಪಕ್ಕದಲ್ಲಿ ಚಂದ್ರ ಉದಯಿಸುತ್ತದೆ. ಹಾಗಾಗಿ ಈ ತಿಂಗಳಿನ ಹೆಸರು ಜ್ಯೇಷ್ಠ ಮಾಸ. ಈ ಅಂಟಾರಸ್‌ನನ್ನು ಜ್ಯೇಷ್ಠ ಎಂದು ನಾಮಕರಣ ಮಾಡಿದ್ದಾರೆ. ಜ್ಯೇಷ್ಠ ಅಂದರೆ ದೊಡ್ಡದು ಎಂದರ್ಥ.

ಇಂದಿನ ಖಗೋಳ ವಿಜ್ಞಾನವೂ ಈಗ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಈ ಅಂಟಾರಸ್ ತುಂಬಾ ದೊಡ್ಡ ದೆಂದು ಸಾರಿದ್ದಾರೆ. ಈ ನಕ್ಷತ್ರ ನಮ್ಮ ಸೂರ್ಯನ ವ್ಯಾಸಕ್ಕಿಂತ ಸುಮಾರು 700 ಪಟ್ಟು ದೊಡ್ಡದಿದೆ. ಹಾಗಾಗಿ ಸೂರ್ಯನಿಗಿಂತ ಕೋಟಿ ಕೋಟಿ ಪಟ್ಟು ದೊಡ್ಡದಿದೆ. ಇದನ್ನೂ ಓದಿ: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ – ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದಾರೆ ಮಾಜಿ ಎಂಎಲ್‌ಸಿ

ಭೂಮಿಗೆ ಚಂದ್ರ ಹತ್ತಿರ ಬಂದಾಗಲೆಲ್ಲಾ ಸಮುದ್ರದ ಭರತ ಇಳಿತಗಳ ಅಬ್ಬರ ಜೋರಾಗಿರುತ್ತದೆ. ಇದೀಗ ಮುಂಗಾರು ಅಬ್ಬರಿಸುವ ಸೂಚನೆ ಇರುವುದರಿಂದ ಹುಣ್ಣಿಮೆ ಹಾಗೂ ಸೂಪರ್ ಮೂನ್‌ಗಳಿಂದ ಸಮುದ್ರದ ತೆರೆಗಳ ಅಬ್ಬರ ಹೆಚ್ಚಿರಲಿದೆ.

ಮಾಹಿತಿ: ಎ.ಪಿ.ಭಟ್, ಉಡುಪಿ, ಭೌತಶಾಸತ್ರಜ್ಞ 

Comments

Leave a Reply

Your email address will not be published. Required fields are marked *