ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸೆ.23 ರಂದು ವಿದ್ಯುತ್ ಪೂರೈಕೆಯಲ್ಲಿ (Power Supply) ವ್ಯತ್ಯಯ ಉಂಟಾಗಲಿದೆ.
ಎಲಿಟ ಪ್ರೋಮೆನೇಡ್ ಉಪಕೇಂದ್ರ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇದನ್ನೂ ಓದಿ: ಒಂದೂವರೆ ಕೋಟಿ, 50 ಗ್ರಾಂ ಚಿನ್ನಾಭರಣ ದೋಚಿದ ʻಸರ್ಕಾರಿ ಅಧಿಕಾರಿಗಳುʼ
ಎಲ್ಲೆಲ್ಲಿ ಕರೆಂಟ್ ಇರಲ್ಲ?
ಎಲಿಟ ಪ್ರೋಮೆನೇಡ್ ಅಪಾರ್ಟ್ಮೆಂಟ್, ಕೆ.ಆರ್.ಲೇಔಟ್, ಶಾರದನಗರ, ಚುಂಚಗಟ್ಟ ಮತ್ತು ಸುತ್ತಮುತ್ತಲ ಪ್ರದೇಶಗಳು. ಎ.ಕೆ.ಅಶ್ರಮ್ ರಸ್ತೆ, ದೇವೇಗೌಡ ರಸ್ತೆ, ಆರ್.ಟಿ.ನಗರ 1ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಸೈನಿಕ ಪ್ರದೇಶ (ಮಿಲಿಟರಿ ಏರಿಯಾ), ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿಡಬ್ಲ್ಯೂಎಸ್‌ಎಸ್‌ಬಿ ಮಲಮೂತ್ರ ಶುದ್ಧೀಕರಣ ಘಟಕ (ಸೆವೇಜ್ ಪ್ಲಾಂಟ್), ಮರಿಯಣ್ಣಪಾಳ್ಯ.
ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್, ಭುವನೇಶ್ವರಿ ನಗರ, ಬಿಇಎಲ್ ಕಾರ್ಪೊರೇಶನ್ ಕಚೇರಿ, ಚಾಣಕ್ಯ ಲೇಔಟ್, ನಾಗವಾರಾ, ಎಂ.ಎಸ್.ರಾಮಯ್ಯ ನಾರ್ತ್ ಸಿಟಿ, ತಾಣಿಸಂದ್ರ ಮುಖ್ಯ ರಸ್ತೆ, ಆರ್ಶೀವಾದ ನಗರ, ಅಮರಜ್ಯೋತಿ ಲೇಔಟ್, ರಾಚೆನಹಳ್ಳಿ ಮುಖ್ಯ ರಸ್ತೆ, ಮೆಸ್ತ್ರಿ ಪಾಳ್ಯ, ರಾಯಲ್ ಎಂಕ್ಲೇವ್, ಶ್ರೀರಾಂಪುರ ಗ್ರಾಮ, ವಿಹೆಚ್‌ಬಿಸಿಎಸ್ ಲೇಔಟ್, ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, ಗೋವಿಂದಪುರ 17ನೇ ಕ್ರಾಸ್, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
