ನಾಳೆ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರಾಗ್ತಾರೆ: ಸಹೋದರ ಸೋಮಶೇಖರ್ ರೆಡ್ಡಿ

ಬೆಂಗಳೂರು: ಅಂಬಿಡೆಂಟ್ ವಂಚನೆ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ ನಾಳೆ ಸಿಸಿಬಿ ವಿಚಾರಣೆ ಹಾಜರಾಗಲಿದ್ದಾರೆ ಎಂದು ಸಹೋದರ ಹಾಗೂ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಮಗೆ ನ್ಯಾಯಾಲಯದ ಮೇಲೆ ನಂಬಿಕೆಯಿದ್ದು, ಕಾನೂನಿಗೆ ಗೌರವ ಕೊಡುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಅವಶ್ಯಕತೆಯೇ ಇಲ್ಲ. ಆದರೆ ಪ್ರಕರಣದ ಮೂಲಕ ಜನಾರ್ದನ ರೆಡ್ಡಿ ಇಮೇಜ್‍ಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ನಾಯಕರ ಜೊತೆಗೆ ಸಾರ್ವಜನಿಕರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಅಂಬಿಡೆಂಟ್ ಕಂಪೆನಿಯ ಫರೀದ್ ಕೂಡ ಹೀಗೆ ಮಾಡಿದ್ದಾರೆ ಎಂದ ಅವರು, ನಮ್ಮ ಮನೆಯ ಸ್ವಾಮೀಜಿಯೊಬ್ಬರು ನಿಮಗೆ ಸದ್ಯದಲ್ಲಿಯೇ ಸಂಕಷ್ಟ ಎದುರಾಗಲಿದೆ ಎಂದಿದ್ದರು. ಅದು ನಿಜವಾಯಿತು. ಜನಾರ್ದನ ರೆಡ್ಡಿ ಮೇಲೆ ಇಲ್ಲದ ಆರೋಪಗಳನ್ನು ಹಾಕುತ್ತಿದ್ದಾರೆ. ಜೊತೆಗೆ ಅಂಬಿಡೆಂಟ್ ಕಂಪೆನಿಯೊಂದಿಗೆ ಜನಾರ್ದನ ರೆಡ್ಡಿ ಹೆಸರು ಸೇರಿಸುತ್ತಿದ್ದಾರೆ ಎಂದು ದೂರಿದರು.

ಈ ಎಲ್ಲ ಬೆಳವಣಿಗೆಗೆ ಸೂಕ್ತ ಉತ್ತರ ನೀಡಲು ಜನಾರ್ದನ ರೆಡ್ಡಿ ನಾಳೆ ಸಿಸಿಬಿ ಅಧಿಕಾರಿಗಳನ್ನು ಭೇಟಿ ಆಗುತ್ತಾರೆ. ಸದ್ಯ ಸಹೋದರ ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ. ಸಿಸಿಬಿಯಿಂದ ನಮಗೆ ಮೊದಲು ಯಾವುದೇ ನೋಟಿಸ್ ಬಂದಿಲ್ಲ. ನನಗೆ ಈ ಬಗ್ಗೆ ಹೆಚ್ಚು ಮಾಹಿತಿಯಿಲ್ಲ ಎಂದು ರೆಡ್ಡಿ ಸಹೋದರ ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *