ಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾ ವೈರಸ್ ಬರಲ್ಲ: ನಟಿ ಶ್ರೀರೆಡ್ಡಿ

ಹೈದರಾಬಾದ್: ಕಾಸ್ಟಿಂಗ್ ಕೌಚ್ ಮೂಲಕ ಸದ್ದು ಮಾಡಿದ್ದ ನಟಿ ಶ್ರೀರೆಡ್ಡಿ ಇದೀಗ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಶ್ರೀರೆಡ್ಡಿ ಅವರ ಹೇಳಿಕೆ ನೀಡಿದ ಜನರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಶ್ರೀರೆಡ್ಡಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಅದರಲ್ಲಿ, ಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾ ವೈರಸ್ ಬರಲ್ಲ ಎಂದು ಬರೆದಕೊಂಡಿದ್ದಾರೆ. ಶ್ರೀರೆಡ್ಡಿ ಅವರ ಈ ಪೋಸ್ಟ್ ನೋಡಿದ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುವ ಮೂಲಕ ನಟಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಈ ಪೋಸ್ಟ್ ನಿಡಿದ ಕೆಲವರು, ಶ್ರೀರೆಡ್ಡಿ ನೀವು ಈ ಅನುಭವವನ್ನು ಮಾಡಿಕೊಂಡಿದ್ದೀರಾ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಕೊರೊನಾ ವೈರಸ್‍ಗೆ ಶ್ರೀರೆಡ್ಡಿ ಸ್ಪೆಷಲ್ ವೈದ್ಯೆ ಎಂದು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು ಹಾಗಾದ್ರೆ ನೀವು ಇದನ್ನು ಪ್ರತಿದಿನ ಮಾಡಬೇಕು ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಶ್ರೀರೆಡ್ಡಿ ಅವರ ಪೋಸ್ಟ್ ಗೆ ಮತ್ತೆ ಕೆಲವರು, ನೀವು ಸತತವಾಗಿ ಸೆಕ್ಸ್ ಮಾಡಿದರೆ, ಕೊರೊನಾದಿಂದ ತಪ್ಪಿಸಿಕೊಳ್ಳಬಹುದು. ಆದರೆ ಕೊರೊನಾ ಬದಲು ನಿಮಗೆ ಎಚ್‍ಐವಿ ಬರುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನಿಮ್ಮಿಂದ ಇದು ಸಾಬೀತಾಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಕೊರೊನಾದಿಂದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಭಾರತೀಯ ಕಲಾವಿದರು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಸರ್ಕಾರ ಕೂಡ ಬಾರ್‍ಗಳು, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ರೆಸ್ಟೋರೆಂಟ್, ಜಿಮ್ ಸೇರಿದಂತೆ ಹಲವು ಪ್ರದೇಶಗಳನ್ನು ಕ್ಲೋಸ್ ಮಾಡಲಾಗಿದೆ. ಹೀಗಿರುವಾಗ ಶ್ರೀರೆಡ್ಡಿ ವಿವಾದಿತ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *