ಡಿಸಿಎಂ ಆದ ಪವನ್ ಕಲ್ಯಾಣ್‌ಗೆ ಭರ್ಜರಿ ಗಿಫ್ಟ್ ಕೊಟ್ಟ ಚಿರಂಜೀವಿ ಪತ್ನಿ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್‌ಗೆ (Pawan Kalyan) ಇದೀಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪತ್ನಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಅತ್ತಿಗೆ ಕೊಟ್ಟ ಗಿಫ್ಟ್‌ ನೋಡಿ ಪವನ್‌ ಕಲ್ಯಾಣ್‌ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಚಿರಂಜೀವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಐ ಲವ್ ಯೂ’ ಯಾವಾಗಲೂ ನೀವೇ ನನ್ನ ಹೀರೋ ಎಂದ ದರ್ಶನ್ ಪುತ್ರ

ಚಿರಂಜೀವಿ ಪತ್ನಿ ಸುರೇಖಾಗೆ (Surekha) ಪವನ್ ಕಲ್ಯಾಣ್ ಮೇಲೆ ವಿಶೇಷ ಪ್ರೀತಿ, ಕಾಳಜಿ ಇದೆ. ತನ್ನ ಮಗನಂತೆಯೇ ಪವನ್ ಕಲ್ಯಾಣ್‌ರನ್ನು ಸುರೇಖಾ ಕಾಣುತ್ತಾರೆ. ಸಿನಿಮಾ ಬಳಿಕ ರಾಜಕೀಯದಲ್ಲೂ ಸಾಧನೆ ಮಾಡಿರುವ ಡಿಸಿಎಂ ಪವನ್ ಕಲ್ಯಾಣ್‌ಗೆ ಅರ್ಥಪೂರ್ಣ ಉಡುಗೊರೆಯೊಂದನ್ನು ನೀಡಿದ್ದಾರೆ. ಮೌಂಟ್ ಬ್ಲಾಂಕ್ ಪೆನ್ ಅನ್ನು ಗಿಫ್ಟ್ ಮಾಡಿದ್ದಾರೆ.

ಅತ್ತಿಗೆ ಕೊಟ್ಟಿರುವ ಪೆನ್ನಿನ ಬೆಲೆ ಸುಮಾರು ಒಂದು ಲಕ್ಷ ರೂ. ಮೌಲ್ಯದಾಗಿದೆ. ಮೌಂಟ್ ಬ್ಲಾಂಕ್ ಡಿಸ್ನಿ ಕ್ಯಾರೆಕ್ಟರ್ ಎಡಿಷನ್ ಪೆನ್ ಅನ್ನು ಸುರೇಖಾ, ಪವನ್ ಕಲ್ಯಾಣ್‌ಗೆ ನೀಡಿದ್ದಾರೆ. ವಿಶೇಷ ಉಡುಗೊರೆ ಸ್ವೀಕರಿಸಿದ ಪವನ್ ಕಲ್ಯಾಣ್ ಅತ್ತಿಗೆಗೆ ಧನ್ಯವಾದ ಸಹ ಹೇಳಿದ್ದಾರೆ. ಅಣ್ಣ ಚಿರಂಜೀವಿ, ಅತ್ತಿಗೆ ಜೊತೆ ಪವನ್ ಕಲ್ಯಾಣ್ ಪೆನ್ನು ಹಿಡಿದು ಫೋಸು ಕೊಟ್ಟಿದ್ದಾರೆ. ತೆಲುಗು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತೀಯ ಎಂಬ ಆಶಯ ಹಾಗೂ ಆಶೀರ್ವಾದ ಇದೆ ಎಂದು ಸಂದೇಶ ಕೂಡ ನೀಡಿದ್ದಾರೆ.

ಇನ್ನೂ ರಾಜಕೀಯದ ಕೆಲಸ ನಡುವೆಯೇ ಒಪ್ಪಿಕೊಂಡಿರುವ ಹರಿಹರ ವೀರ ಮಲ್ಲು ಸಿನಿಮಾ, ಶ್ರೀಲೀಲಾ ಜೊತೆ ಉಸ್ತಾದ್‌ ಭಗತ್‌ ಸಿಂಗ್‌ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳನ್ನು ಪವನ್‌ ಕಲ್ಯಾಣ್‌ ಮುಗಿಸಿಕೊಡಬೇಕಿದೆ.