`ಪುಷ್ಪ 2′ ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಇಲ್ಲಿದೆ ಅಪ್‌ಡೇಟ್

`ಪುಷ್ಪ’ (Pushpa) ಚಿತ್ರದ ಸೂಪರ್ ಸಕ್ಸಸ್ ನಂತರ ಪುಷ್ಪ 2 ಚಿತ್ರದ ಶೂಟಿಂಗ್‌ನಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. `ಪುಷ್ಪ 2′ (Pushpa 2) ನಂತರ ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.

ಸ್ಟೈಲೀಶ್ ಸ್ಟಾರ್ `ಪುಷ್ಪ-2′ ಚಿತ್ರೀಕರಣ ಮುಗಿಯೋ ಮೊದಲೇ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಪುಷ್ಪ-2 ಬಳಿಕ ಅಲ್ಲು ಅರ್ಜುನ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಆದರೀಗ ಕುತೂಹಲಕ್ಕೆ ತೆರೆಬಿದ್ದಿದೆ. ಪ್ಯಾನ್ ಇಂಡಿಯಾ ಸ್ಟಾರ್ ಇದೀಗ ತೆಲುಗಿನ ಖ್ಯಾತ ನಿರ್ದೇಶಕ ‌ʻಅರ್ಜುನ್ ರೆಡ್ಡಿʼ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ.‌ ಇದನ್ನೂ ಓದಿ: ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

ಮೊದಲ ಸಿನಿಮಾ `ಅರ್ಜುನ್ ರೆಡ್ಡಿ’ (Arjun Reddy) ಸೂಪರ್ ಸಕ್ಸಸ್ ಕಂಡ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ತೆಲುಗಿನಲ್ಲಿ ಅರ್ಜುನ್ ರೆಡ್ಡಿ ಬ್ಲಾಕ್‌ಬಸ್ಟರ್ ಆದ ಬಳಿಕ ಹಿಂದಿಗೆ ಹಾರಿದರು. ಬಾಲಿವುಡ್‌ನಲ್ಲಿ ಕಬೀರ್ ಸಿಂಗ್ ಹೆಸರಿನಲ್ಲಿ `ಅರ್ಜುನ್ ರೆಡ್ಡಿ’ ಸಿನಿಮಾವನ್ನು ರಿಮೇಕ್ ಮಾಡಿದರು. ಕಬೀರ್ ಸಿಂಗ್ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು.

ಶಾಹಿದ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ಸಂದೀಪ್ ರೆಡ್ಡಿ- ರಣ್‌ಬೀರ್‌ ಕಪೂರ್ ಜೊತೆ `ಅನಿಮಲ್’ ಸಿನಿಮಾ ಮಾಡುತ್ತಿದ್ದಾರೆ. `ಅನಿಮಲ್’ನಲ್ಲಿ ರಣಬೀರ್ ಕಪೂರ್ (Ranbir Kapoor) ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಳ್ಳುತ್ತಿದ್ದಾರೆ. `ಅನಿಮಲ್’ (Animal) ಸಿನಿಮಾದ ಚಿತ್ರೀಕರಣ ಮುಗಿಯೋ ಮುನ್ನವೇ ಸಂದೀಪ್ ರೆಡ್ಡಿ ಜೊತೆ ಸಿನಿಮಾ ಮಾಡಲು ಅಲ್ಲು ಅರ್ಜುನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

`ಅರ್ಜುನ್ ರೆಡ್ಡಿ’ ಚಿತ್ರದ ಸಕ್ಸಸ್‌ಫುಲ್ ಡೈರೆಕ್ಷರ್ ಈಗ ಅಲ್ಲು ಅರ್ಜುನ್ ಅವರಂತಹ ಸ್ಟಾರ್ ನಟನ ಜೊತೆ ಕೈ ಜೋಡಿಸಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರುತ್ತಿರೋದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

Comments

Leave a Reply

Your email address will not be published. Required fields are marked *