ತೋಳನಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ವಹಿಸಿ: ಶೆಟ್ಟರ್ ಸೂಚನೆ

ಹುಬ್ಬಳ್ಳಿ: ತೋಳನಕೆರೆಗೆ ಸುತ್ತಲಿನ ಪ್ರದೇಶಗಳಿಂದ ಕೊಳಚೆ ನೀರು ಬಂದು ಸೇರುತ್ತಿರುವುದರಿಂದ ಕೆರೆಯ ನೀರು ಮಲಿನವಾಗುತ್ತಿದೆ. ಹೀಗಾಗಿ ಕೊಳಚೆ ನೀರು ಕೆರೆಗೆ ಸೇರದಂತೆ ಕ್ರಮವಹಿಸಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರ, ರೇಣುಕಾ ನಗರ ಸೇರಿದಂತೆ ತೋಳನಕೆರೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಶೆಟ್ಟರ್ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಒಳಚರಂಡಿ ನಕ್ಷೆಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಯರ ಸುರಕ್ಷಣೆಗಾಗಿ ಹೈದರಾಬಾದ್ ಪೊಲೀಸರ ವಿನೂತನ ಘಟಕ ಆರಂಭ

ಕೆಲವು ಸ್ಥಳಗಳಲ್ಲಿ ಒಳಚರಂಡಿ ಎಲ್ಲಿದೆ? ಎಂಬುದೇ ಕಂಡುಬರುತ್ತಿಲ್ಲ. ಮೈಸೂರು ನಗರದಲ್ಲಿ ಒಳಚರಂಡಿ ಸರ್ವೇಗಾಗಿ ಬಳಸಿದ ಯಂತ್ರೋಪಕರಣಗಳನ್ನು ಹುಬ್ಬಳ್ಳಿಗೆ ತರಿಸಿ ಚರಂಡಿ ಮಾರ್ಗಗಳ ಸರ್ವೇ ಕಾರ್ಯಕೈಗೊಳ್ಳಿ. ಸದ್ಯ ಹೂಳು ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ. ಕೊಳಚೆ ನೀರು ಕೆರೆಗೆ ಸೇರುವುದು ತಪ್ಪಬೇಕು. ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಕ್ತ ಯೋಜನೆ ರೂಪಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಕಾರ್ಪೋರೇಟರ್ ರಾಮಣ್ಣ ಬಡಿಗೇರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಆಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನಿಸಿದ ನಕಲಿ ಅಭ್ಯರ್ಥಿ ಪೊಲೀಸರ ವಶ

Comments

Leave a Reply

Your email address will not be published. Required fields are marked *