ಆಟವಾಡುತ್ತಾ ಬ್ಯಾಗ್ ಚೆಕ್ಕಿಂಗ್ ಮಶೀನ್‍ನೊಳಗೆ ಹೋದ ಮಗು

ನ್ಯೂಯಾರ್ಕ್: ಆಟವಾಡುತ್ತಾ ಎರಡು ವರ್ಷದ ಮಗು ವಿಮಾನ ನಿಲ್ದಾಣದಲ್ಲಿಯೇ ಬ್ಯಾಗ್ ಚೆಕ್ಕಿಂಗ್ ಮಶೀನ್ ನೊಳಗೆ ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮೆರಿಕಾದ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಮಹಿಳೆಯೊಬ್ಬರು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಮಗುವನ್ನ ಕೆಳಗೆ ಇಳಿಸಿದ ಮಹಿಳೆ ಟಿಕೆಟ್ ಪ್ರಿಂಟ್ ತೆಗೆದುಕೊಳ್ಳುತ್ತಿದ್ದರು. ಕೆಳಗೆ ಇಳಿಯುತ್ತಿದ್ದಂತೆ ಚಲನೆಯಲ್ಲಿದ್ದ ಬ್ಯಾಗ್ ಚೆಕ್ಕಿಂಗ್ ಮಶೀನ್ ನೊಳಗೆ ಹೋಗಿದೆ.

ಮಗು ಮಶೀನ್ ನಲ್ಲಿ ಹೋಗುತ್ತಿದ್ದಂತೆ ಭಯಗೊಳ್ಳದೇ ಆಟವಾಡಲು ಆರಂಭಿಸಿದೆ. ಕೂಡಲೇ ಎಚ್ಚೆತ್ತ ವಿಮಾನ ನಿಲ್ದಾಣ ಸಿಬ್ಬಂದಿ ಚಾಲನೆಯಲ್ಲಿ ಮಶೀನ್ ಬಂದ್ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

ಟಿಕೆಟ್ ಪ್ರಿಂಟ್ ತೆಗೆದುಕೊಳ್ಳುವಷ್ಟರಲ್ಲಿ ಪಕ್ಕದಲ್ಲಿ ಮಗು ಇರಲಿಲ್ಲ. ಕೂಡಲೇ ಅಲ್ಲಿಯ ಸಿಬ್ಬಂದಿ ಮತ್ತು ಪೊಲೀಸರಿಗೆ ತಿಳಿಸಿದೆ. ಅಲ್ಲಿಯೇ ಬ್ಯಾಗ್ ಚೆಕ್ಕಿಂಗ್ ನಲ್ಲಿ ಹೋಗಿರಬಹುದೆಂದು ಶಂಕಿಸಿ ನೋಡುವಷ್ಟರಲ್ಲಿ ಮಗು ಸ್ಟೋರಿಂಗ್ ಕೋಣೆ ಪ್ರವೇಶಿಸಿತ್ತು ಎಂದು ಏರ್‍ಪೋರ್ಟ್ ಅಧಿಕಾರಿಗಳು ತಿಳಿಸಿ, ವಿಡಿಯೋ ಬಿಡುಗಡೆಗೊಳಿಸಿದ್ದಾರೆ.

https://www.youtube.com/watch?v=T7E1YmRniNY

Comments

Leave a Reply

Your email address will not be published. Required fields are marked *