ಹಾಸನಾಂಬೆ ದರ್ಶನಕ್ಕೆ ಇಂದು ತೆರೆ- ಹೊಸ ಸಂಪ್ರದಾಯ ಆರಂಭಿಸಿದ ಜಿಲ್ಲಾಡಳಿತ

ಹಾಸನ: ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಮಧ್ಯಾಹ್ನ 12.30 ಕ್ಕೆ ತೆರೆ ಬಿಳಲಿದೆ. ಇದೇ ಮೊದಲ ಬಾರಿಗೆ ಹಾಸನ ಜಿಲ್ಲಾಡಳಿತ ಹೊಸದೊಂದು ಸಂಪ್ರದಾಯವನ್ನು ಆರಂಭಿಸಿದೆ.

ನವೆಂಬರ್ 1 ರಿಂದ ಆರಂಭವಾಗಿದ್ದ ಹಾಸನಾಂಬೆ ಉತ್ಸವಕ್ಕೆ ಇಂದು ತೆರೆ ಬಿಳಲಿದೆ. ಈ ಉತ್ಸವವು 9 ದಿನಗಳ ಕಾಲ ನಡೆಯುತ್ತದೆ. ಗುರುವಾರ ರಾತ್ರಿ ದೇವಿಯ ಸನ್ನಿಧಾನದಲ್ಲಿ ಸಿದ್ದೇಶ್ವರ ಸ್ವಾಮಿ ಚಂದ್ರಮಂಡಲೋತ್ಸವ ನಡೆಸಲಾಯ್ತು. ಇಂದು ವಿಶ್ವರೂಪ ದರ್ಶನದ ನಂತರ ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲಿದೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಭಕ್ತರ ಸಂಖ್ಯೆ ಈ ಬಾರಿ ಕೊಂಚ ಕಡೆಮೆಯಾಗಿದೆ. ಆದರೂ ಲಕ್ಷಾಂತರ ಮಂದಿ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಇಂದು ಸಾರ್ವಜನಿಕರಿಗೆ ದೇವಿ ದರ್ಶನ ಇಲ್ಲದಿದ್ದರೂ ದರ್ಶನಕ್ಕಾಗಿ ಹಲವು ಭಕ್ತರು ಕಾದು ನಿಂತಿದ್ದಾರೆ.

ಹಾಗೇಯೆ ಹಾಸನ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಹೊಸ ಸಂಪ್ರದಾಯವನ್ನು ಆರಂಭಿಸಿದೆ. ಗರ್ಭಗುಡಿ ಬಾಗಿಲು ಮುಚ್ಚುವ ಮುಂಚೆಯೇ ಕಾಣಿಕೆ ಹಣವನ್ನು ಎಣಿಕೆ ಮಾಡುವುದು. ಹೌದು, ಪ್ರತಿ ವರ್ಷ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಿದ ನಂತರವೇ ಹುಂಡಿ ಹಣವನ್ನು ಎಣಿಸಲಾಗುತ್ತಿತ್ತು. ಕಳೆದ ವರ್ಷ ಒಟ್ಟು ನಾಲ್ಕೂವರೆ ಕೋಟಿ ಕಾಣಿಕೆ ರೂಪದಲ್ಲಿ ದೇವಾಲಯಕ್ಕೆ ಆದಾಯ ಬಂದಿತ್ತು. ಈ ಬಾರಿ ಭಕ್ತಾಧಿಗಳ ಸಂಖ್ಯೆ ಕೊಂಚ ಕಡಿಮೆ ಇದ್ದರಿಂದ, ಕಾಣಿಕೆ ಹಣವು ಕಡಿಮೆಯಾಗಬಹುದು ಎಂದು ಉಹಿಸಲಾಗಿದೆ. ಸದ್ಯ ಈ ವರ್ಷ ದೇವಾಲಯಕ್ಕೆ ಎಷ್ಟು ಆದಾಯ ಬರುತ್ತದೆ ಎಂದು ಜಿಲ್ಲಾಡಳಿತ ತಿಳಿಸುವವರೆಗೂ ಕಾಯಬೇಕು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *