ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಇಂದಿಗೆ ಅಂತ್ಯ

ಬೆಂಗಳೂರು: ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಗೆ ಇಂದು ಕೊನೆಯ ದಿನವಾಗಿದೆ. ಈ ಮೂಲಕ 5 ದಿನದ ಪಾದಯಾತ್ರೆಗೆ ಇಂದು ಬೇಕ್ ಬೀಳಲಿದೆ. ಕೊನೆಯ ದಿನ ಇಂದು ಬೃಹತ್ ಸಮಾವೇಶ ಅಂತಿಮ ಪಾದಯಾತ್ರೆ ನಡೆಯಲಿದ್ದು, ನಗರದಲ್ಲಿಂದು ಮೆಗಾ ಟ್ರಾಫಿಕ್ ಜಾಮ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಬಳ್ಳಾರಿ ರಸ್ತೆ, ಮಲ್ಲೇಶ್ವರಂ, ಮೆಜೆಸ್ಟಿಕ್, ಚಾಮರಾಜಪೇಟೆ, ಬಸವನಗುಡಿ ಕಡೆ ಜಾಮ್ ಆಗುವ ಸಾಧ್ಯತೆಗಳಿವೆ. ಬೆಳಗ್ಗೆ 9.30ಗೆ ಪ್ಯಾಲೆಸ್ ಗ್ರೌಂಡ್ ನಿಂದ ಪಾದಯಾತ್ರೆ ಆರಂಭವಾಗಲಿದೆ. ನಂತರ ಕಾವೇರಿ ಥಿಯೇಟರ್, ಸ್ಯಾಂಕಿ ಟ್ಯಾಂಕ್, 18ನೇ ಕ್ಲಾಸ್, ಮೀಶ್ವರಂ, ಮಾರ್ಗೋಸಾ ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಲಿಂಕ್ ರಸ್ತೆ, ಶೇಷಾದ್ರಿಪುರಂ, ರಾಜೀವ್ ಗಾಂಧಿ ಪ್ರತಿಮೆ ಫ್ಲಾಟ್‍ಫಾರಂ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್‍ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ರಾಯನ್ ಸರ್ಕಲ್ ಹಾಗೂ ಈದ್ಗಾ ಮೈದಾನದಲ್ಲಿ ಕೊನೆಯಾಗಲಿದೆ. ಇದನ್ನು ಓದಿ: ಕಾರು ಡ್ರೈವಿಂಗ್‌ ಮಾಡ್ಕೊಂಡೆ ಆಸ್ಪತ್ರೆಗೆ – ಹೆಣ್ಣು ಮಗುವಿನ ತಾಯಿಯಾದ ದಿಶಾ ಮದನ್

ಮೊದಲ ಹಂತದ 5 ಕಿಮೀ ನಲ್ಲಿ ಚಾಮರಾಜ ಪೇಟೆ ಈದ್ಗಾ ಮೈದಾನ ತಲುಪಲಿರುವ ಪಾದಯಾತ್ರೆ, ಅಲ್ಲಿ ಭೋಜನ ಮುಗಿಸಿ ಅಲ್ಲಿಂದ ನ್ಯಾಶನಲ್ ಕಾಲೇಜು ಆಟದ ಮೈದಾನದ ಕಡೆಗೆ 3 ಕಿಮೀ ಪಾದಯಾತ್ರೆ ನಡೆಯಲಿದೆ. ಸಂಜೆ 4 ಗಂಟೆಗೆ ಬಸವನಗುಡಿಯ ನ್ಯಾಷನಲ್ ಗ್ರೌಂಡ್ಸ್ ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಒಟ್ಟಾರೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಇಂದು ಅಂತಿಮ ತೆರೆ ಬೀಳಲಿದೆ. ಇದನ್ನು ಓದಿ: ಪುಟಿನ್‌ ಜೊತೆ 2ನೇ ಬಾರಿ ಮೋದಿ ಮಾತುಕತೆ

Comments

Leave a Reply

Your email address will not be published. Required fields are marked *