ಸ್ಯಾಂಡಲ್‍ವುಡ್ ನ ಮೂವರು ದಿಗ್ಗಜರಿಗೆ ಇಂದು ಬರ್ತ್ ಡೇ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇಂದು ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ 67ನೇ ಜಯಂತೋತ್ಸವ. ಕಳೆದ ವರ್ಷದಂತೆ ಈ ವರ್ಷ ಕೂಡ ವಿಷ್ಣುದಾದ ಅವರ ಹುಟ್ಟುಹಬ್ಬವನ್ನ 2 ಕಡೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಿಸಿದ್ರೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ದಾದಗೆ ನಮಿಸಲಿದ್ದಾರೆ.

ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗ್ಲೇ ಉಡುಗೊರೆ, ಹಾರ, ಕೇಕ್ ಬೇಡ ಅಂತ ಹೇಳಿರೋ ಉಪ್ಪಿ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ. ಉಪ್ಪಿ ಅಭಿನಯದ ಉಪೇಂದ್ರ ಮತ್ತೆ ಹುಟ್ಟಿಬಾ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಕೂಡ ಲಾಂಚ್ ಆಗಲಿದೆ.

ಇನ್ನೂ ಸ್ಯಾಂಡಲ್‍ವುಡ್ ಚಂದದ ಗೊಂಬೆ ಶೃತಿ ಅವರು 42 ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಓಂ ಸಾಯಿಪ್ರಕಾಶ್ ಸಾರಥ್ಯದ ಅಬ್ಬೆ ತುಮಕೂರು ವಿಶ್ವಾರಾಧ್ಯರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗ್ತಿರೋ ಶೃತಿ ಶೂಟಿಂಗ್ ಸೆಟ್‍ನಲ್ಲಿ ಕುಟುಂಬ ಸಮೇತ ಹುಟ್ಟುಬ್ಬ ಆಚರಿಸಿದ್ದಾರೆ. ವಿಷ್ಣುದಾದ ದೈಹಿಕವಾಗಿ ನಮ್ಮ ಜೊತೆ ಇಲ್ಲವಾದ್ರು ಅಭಿಮಾನಿಗಳ ಮನದಲ್ಲಿ ಅವ್ರು ಎಂದಿಗೂ ಅಮರ. ಬರ್ತ್ ಡೇ ಸಂಭ್ರಮದಲ್ಲಿರೋ ರಿಯಲ್ ಸ್ಟಾರ್ ಉಪ್ಪಿ, ನಟಿ ಶೃತಿ ಅವ್ರು ಇನ್ನಷ್ಟು ಒಳ್ಳೆ ಕೆಲಸ ಮಾಡಿ ಉತ್ತಮ ಹೆಸರುಗಳಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

Comments

Leave a Reply

Your email address will not be published. Required fields are marked *