ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು, ನಾಳೆ ಫುಡ್ ಫೆಸ್ಟಿವಲ್- ನೀವೂ ಬಂದು ಭಾಗವಹಿಸಿ

ಬೆಂಗಳೂರು: ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ದೊರೆಯುತ್ತವೆ. ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು ಮತ್ತು ನಾಳೆ ಮಲ್ಲೇಶ್ವರಂನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ.

ನೀವು ವಿವಿಧ ಬಗೆಯ ಭಕ್ಷಭೋಜನ ಸವಿಯ ಬೇಕೆಂದುಕೊಂಡಿದ್ದೀರಾ..? ಕರ್ನಾಟಕ ಅಲ್ಲದೇ ಭಾರತದ ಬೇರೆಬೇರೆ ರಾಜ್ಯಗಳ ಆಹಾರ ಪದ್ಧತಿ ತಿಳ್ಕೋಬೇಕಾ..? ತಡ ಯಾಕೆ, ಇಂದೇ ಮಲ್ಲೇಶ್ವರಂ ಕಡೆ ಹೆಜ್ಜೆ ಹಾಕಿ. ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಈ ಫುಡ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ರಾತ್ರಿ 9ಗಂಟೆವರೆಗೆ ನೀವು ಬಗೆಬಗೆಯ ತಿಂಡಿ ತಿನಿಸನ್ನು ಮೆಲ್ಲಬಹುದು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಅಡುಗೆ ರುಚಿ ಫುಡ್ ಫೆಸ್ಟ್ ನಲ್ಲಿರಲಿದೆ.

ಫುಡ್ ಫೆಸ್ಟ್ ಗೆ ಉಚಿತ ಪ್ರವೇಶವಿದ್ದು, 40 ಕ್ಕೂ ಹೆಚ್ಚು ಮಳಿಗೆಗಳನ್ನ ತೆರೆಯಲಾಗಿದೆ. ಫುಡ್ ಫೆಸ್ಟಿವಲ್‍ನಲ್ಲಿ ಏನೆಲ್ಲಾ ಸ್ಪೆಷನ್ ಇದೆ ಅನ್ನೋದನ್ನ ನೋಡೋದಾದ್ರೆ…
* ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರ ಪ್ರದರ್ಶನ
* ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಲಭ್ಯ
* ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು
* ಪ್ರತಿ 30 ನಿಮಿಷಗಳಿಗೊಮ್ಮೆ ನೋಂದಾಯಿಸಲ್ಪಟ್ಟ ಸಂದರ್ಶಕರಿಗೆ ಲಕ್ಕಿ ಡ್ರಾ ಮೂಲಕ ಉಡುಗೊರೆ

ಇಷ್ಟೇ ಅಲ್ಲ, ಜತೆಗೆ ಬೆಳಗ್ಗೆ ರಂಗೋಲಿ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಫುಡ್ ಫೆಸ್ಟ್ ಗೆ ವಿಸಿಟ್ ಮಾಡಿ, ಬಾಯಿ ಚಪ್ಪರಿಸಿ. ಇಂದು ನಾಳೆ ಮಲ್ಲೇಶ್ವರಂಗೆ ಬರೋದನ್ನು ಮಾತ್ರ ಮರೀಬೇಡಿ. ಇದನ್ನೂ ಓದಿ: ನೀವು ಆಹಾರ ಪ್ರಿಯರೇ, ಹಾಗಾದ್ರೆ ಪಬ್ಲಿಕ್ ಟಿವಿಯ ಫುಡ್ ಫೆಸ್ಟ್‌ಗೆ ಬನ್ನಿ

https://www.youtube.com/watch?v=KMbntfnjIPk

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *