ಮಲಯಾಳಂನಲ್ಲಿ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’- ರಿಲೀಸ್ ಡೇಟ್ ಫಿಕ್ಸ್

ಸ್ಯಾಂಡಲ್‌ವುಡ್ (Sandalwood) ಅಂಗಳದಲ್ಲಿ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ (Toby Film) ಸಿನಿಮಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ ಮಾಲಿವುಡ್‌ನಲ್ಲಿ ಅಬ್ಬರಿಸಲು ವೇದಿಕೆ ಸಜ್ಜಾಗಿದೆ. ಮಲಯಾಳಂನಲ್ಲೂ ‘ಟೋಬಿ’ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ.

ಆಗಸ್ಟ್ 25ರಂದು ನೈಜ ಕಥೆಯನ್ನ ಆಧರಿಸಿದ ‘ಟೋಬಿ’ ಸಿನಿಮಾ ತೆರೆ ಕಂಡಿತ್ತು. ರಾಜ್ ಬಿ ಶೆಟ್ಟಿ (Raj B Shetty) ನಟನೆಗೆ ಕರ್ನಾಟಕ ಜನತೆ ಮಾರು ಹೋಗಿತ್ತು. ರಾಜ್- ಚೈತ್ರಾ ಆಚಾರ್ ಕಾಂಬೋ ಮೋಡಿ ಮಾಡಿತ್ತು. ಈಗ ಮಲಯಾಳಂ ಭಾಷೆಯಲ್ಲೂ ಕೂಡ ಟೋಬಿ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಸೆ.22ಕ್ಕೆ ಟೋಬಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಇದನ್ನೂ ಓದಿ:ಲೋಕೇಶ್ ಕನಗರಾಜ್ ಜೊತೆ ರಜನಿಗೆ ಮುನಿಸಿಲ್ಲ : ಹೊಸ ಸಿನಿಮಾ ಘೋಷಣೆ

 

View this post on Instagram

 

A post shared by Raj B Shetty (@rajbshetty)

ರಾಜ್ ಬಿ ಶೆಟ್ಟಿ ಮಾತು ಬರ ವ್ಯಕ್ತಿಯಾಗಿ ಸಿನಿಮಾದಲ್ಲಿ ಜೀವತುಂಬಿದ್ದಾರೆ. ಸಿನಿಮಾದಲ್ಲಿ ಅವರಿಗೆ ಡೈಲಾಗ್ ಇಲ್ಲ, ಆದರೆ ಅವರ ನಟನೆಯೇ ಮಾತನಾಡುವಂತೆ ಮಾಡಿದೆ.

‘ಟೋಬಿ’ಗೆ ನಾಯಕಿಯರಾಗಿ ಚೈತ್ರಾ ಆಚಾರ್‌ ಸೈ ಎನಿಸಿಕೊಂಡಿದ್ದಾರೆ. ಕನ್ನಡಿಗರ ಮನಗೆದ್ದ ಈ ಸಿನಿಮಾ, ಈಗ ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]