ಕೋಲ್ಕತ್ತಾ: ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್ ಬಡವರಿಗೆ ಉಚಿತ ಮಾಸ್ಕ್ ಹಂಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನುಸ್ರತ್ ತಮ್ಮ ಇನ್‍ಸ್ಟಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ನುಸ್ರತ್ ಕೊರೊನಾದಿಂದ ತಪ್ಪಿಸಿಕೊಳ್ಳಲು ಜನರಿಗೆ ಉಚಿತ ಮಾಸ್ಕ್ ಹಂಚುತ್ತಿದ್ದಾರೆ. ನುಸ್ರತ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್‍ಸ್ಟಾದಲ್ಲಿ ನುಸ್ರತ್, ಬನ್ನಿ. ಈ ವೈರಸ್‍ನಿಂದ ತಪ್ಪಿಸಿಕೊಳ್ಳಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗಳ್ಳೋಣ ಹಾಗೂ ಅಗತ್ಯ ಇರುವವರಿಗೆ ಸಹಾಯ ಮಾಡೋಣ. ಇಂತಹ ಸಂದರ್ಭಗಳಲ್ಲಿ ತರಕಾರಿಗಳನ್ನು ಮತ್ತು ದೈನಂದಿನ ಜೀವನದ ವಸ್ತುಗಳನ್ನು ಒದಗಿಸುವ ಜನರಿಗೆ ಸಹಾಯ ಮಾಡಲು ಮುಂದಾಗಿ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲರಿಗೂ ಸಹಾಯ ಮಾಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿ. ಹಾಗೆಯೇ ನಿಮ್ಮ ಆರೋಗ್ಯ ಹಾಗೂ ಎಲ್ಲರ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಒಟ್ಟಾಗಿ ಹೋರಾಡಿ ಎಂದು ಪೋಸ್ಟ್ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪತ್ರಿದಿನ ಹೆಚ್ಚಾಗುತ್ತಿದೆ. ಕೊರೊನಾ ಭಯದಿಂದ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಮನೆಯಲ್ಲಿಯೇ ತಮ್ಮ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ನುಸ್ರತ್ ಜನರಿಗೆ ಸಹಾಯ ಮಾಡಲು ರಸ್ತೆಗೆ ಇಳಿದಿದ್ದನು ನೋಡಿ ನೆಟ್ಟಿಗರು ಅವರನ್ನು ಹೊಗಳುತ್ತಿದ್ದಾರೆ.


Leave a Reply