ತಿರುಪತಿ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ – 40 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆದ ಫ್ಲೈಟ್

ಹೈದರಾಬಾದ್:‌ ತಿರುಪತಿಯಿಂದ ಹೈದರಾಬಾದ್‌ಗೆ (Tirupati-Hyderabad) ಹೋಗುತ್ತಿದ್ದ ಇಂಡಿಗೋ ವಿಮಾನ (IndiGo Flight) ತಾಂತ್ರಿಕ ದೋಷದಿಂದ ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲೇ ಸುತ್ತಾಡಿದೆ.

ಏರ್‌ಬಸ್ A321neo ವಿಮಾನ ಭಾನುವಾರ ಸಂಜೆ 7:42 ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಿಂದ ಹೊರಟಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಳಿಕ 40 ನಿಮಿಷಗಳ ಕಾಲ ವಿಮಾನ ಆಕಾಶದಲ್ಲೇ ಸುತ್ತಾಡಿ, ರಾತ್ರಿ 8:34ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಇದನ್ನೂ ಓದಿ: ದೆಹಲಿ | ಲ್ಯಾಂಡಿಂಗ್‌ ವೇಳೆ ತೀವ್ರ ಪ್ರಕ್ಷುಬ್ಧತೆ – 38 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆದು ಲ್ಯಾಂಡ್‌ ಆದ ಇಂಡಿಗೋ ಫ್ಲೈಟ್

ಇದರಿಂದಾಗಿ ಹೈದರಾಬಾದ್‌ಗೆ ನಿಗದಿಪಡಿಸಲಾದ ಕೊನೆಯ ವಿಮಾನವನ್ನು ರದ್ದುಗೊಳಿಸಲಾಯಿತು. ವಿಮಾನ ರದ್ದಾದ ವಿಚಾರಕ್ಕೆ ಪ್ರಯಾಣಿಕರು, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೋ ವೈರಲ್‌ ಆಗಿದೆ.

ಘಟನೆಯ ಕುರಿತು ವಿಮಾನಯಾನ ಸಂಸ್ಥೆ ಇದುವರೆಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ಟೇಕಾಫ್‌ ಆಗಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ – ಸತತ 2 ಗಂಟೆ ಆಕಾಶದಲ್ಲೇ ಗಿರಕಿ ಹೊಡೆದ ಏರ್‌ ಇಂಡಿಯಾ ಫ್ಲೈಟ್‌