ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿರೋದು ಸತ್ಯ – ಸಿ.ಟಿ ರವಿ

ಹುಬ್ಬಳ್ಳಿ: ಉರಿಗೌಡ, ನಂಜೇಗೌಡ ಐತಿಹಾಸಿಕ ಪಾತ್ರಗಳು, ಅವರಿಬ್ಬರೂ ಟಿಪ್ಪು‌ವನ್ನ (Tipu Sultan) ಕೊಂದಿರೋದು ಸತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.

ಧಾರವಾಡ (Dharwad) ಜಿಲ್ಲೆಯ ಕುಂದಗೋಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬದುಕಿದ್ದರೆ ಹಾಸನವನ್ನ ʻಕೈಮಾಬಾದ್ʼ ಅಂತಾ ಕರೆಯುತ್ತಿದ್ದ, ಕುಮಾರಸ್ವಾಮಿಗೆ (HD Kumaraswamy) ಹಾಸನವನ್ನ ಆ ರೀತಿಯಲ್ಲಿ ಕರೆಸಿಕೊಳ್ಳೋಕೆ ಇಷ್ಟ ಇತ್ತು ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ; ಕಾರು, ಟಿಪ್ಪರ್‌ ಡಿಕ್ಕಿ

ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್, ಟಿಪ್ಪು ಸುಲ್ತಾನ್ ಬದುಕಿದ್ರೆ ಯಾರ ಯಾರ ಕಥೆ ಏನಾಗ್ತಿತ್ತೋ ಗೊತ್ತಿಲ್ಲ. ಕುಮಾರಸ್ವಾಮಿಯವರಿಗೆ ಹಾಸನ ಬೇಕೋ? ಕೈಮಾಬಾದ್ ಬೇಕೋ? ಅವರೇ ತಿರ್ಮಾನಿಸಲಿ ಎಂದರು. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

ನಮಗೆ ರಾಷ್ಟ್ರವೇ ಮೊದಲು: ವಿರೋಧಿಗಳು ನಮ್ಮನ್ನ ಮೀಸಲಾತಿ ವಿರೋಧಿ ಅನ್ನುತ್ತಿದ್ದರು. ನಾವು ಮೀಸಲಾತಿ ವಿರೋಧಿಗಳಲ್ಲ. ಕೆಲವರಿಗೆ ವೋಟ್ ಮೊದಲು, ಆದ್ರೆ ನಮಗೆ ರಾಷ್ಟ್ರವೇ ಮೊದಲು. ವೋಟ್ ಮೊದಲು ಅನ್ನೋರು ಕುಕ್ಕರ್ ಬಾಂಬ್ ಬ್ಲಾಸ್ಟ್ ನಲ್ಲಿ ಎಷ್ಟು ವೋಟ್ ಬರತ್ತೆ? ಅಂತಾ ಲೆಕ್ಕ ಹಾಕ್ತಾರೆ ಎಂದು ತಿರುಗೇಟು ನೀಡಿದ್ದಾರೆ.

Comments

Leave a Reply

Your email address will not be published. Required fields are marked *