ನದಿ ತುಂಬಿದ್ರೂ ಮತ ಹಾಕದ ಗ್ರಾಮಗಳ ಕೆರೆಗಳಿಗಿಲ್ಲ ನೀರು- ತಿಪಟೂರು ಶಾಸಕ ಷಡಕ್ಷರಿಯಿಂದ ಸೇಡಿನ ರಾಜಕೀಯ

ತುಮಕೂರು: ಉತ್ತಮ ಮಳೆಯಿಂದ ಹೇಮಾವತಿ ತುಂಬಿ ಹರಿಯುತ್ತಿದ್ದು, ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ಜನರ ಮೊಗದಲ್ಲಿ ಸಂತಸ ಮೂಡಿದೆ. ಆದ್ರೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮದ ಜನರು ಮಾತ್ರ ಶಾಸಕ ಷಡಕ್ಷರಿ ಸೇಡಿನ ರಾಜಕಾರಣಕ್ಕೆ ಬಲಿಯಾಗಿ ಬರದ ಪರಿಸ್ಥಿತಿ ಎದುರಿಸಬೇಕಾಗಿದೆ.

ಕಳೆದ ಚುನಾವಣೆಯಲ್ಲಿ ಕೆಲವು ಗ್ರಾಮಗಳಿಂದ ಶಾಸಕ ಷಡಕ್ಷರಿ ಅವರಿಗೆ ಕಡಿಮೆ ಪ್ರಮಾಣದಲ್ಲಿ ಮತಗಳು ಬಂದಿದ್ದವು. ಇದೇ ಕಾರಣಕ್ಕೆ ಸನ್ಮಾನ್ಯ ಶಾಸಕರು ಅಧಿಕಾರಕ್ಕೆ ಬಂದ ಬಳಿಕ ಸಾರ್ತುವಳ್ಳಿ, ಹುರುಳೇಹಳ್ಳಿ, ಚೌಲಿಹಳ್ಳಿ, ಆಲೂರು, ಹಾಲ್ಕುರಿಕೆ, ಬೊಮ್ಮಾಲಾಪುರ, ಭೈರನಾಯಕನಹಳ್ಳಿ ಸೇರಿದಂತೆ 18 ಕೆರೆಗಳಿಗೆ ಹೇಮಾವತಿ ನೀರು ಹರಿಸದಂತೆ ತಡೆದಿದ್ದಾರೆ.

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಾರಂಭಿಸಲಾಗಿತ್ತು. ಅಲ್ಲದೆ 83 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್‍ಲೈನ್ ಕೂಡಾ ಅಳವಡಿಸಲಾಗಿತ್ತು. ಆದ್ರೆ ಪೈಪ್‍ಲೈನ್ ಅಳವಡಿಸಿದ ಬಳಿಕ ಕೇವಲ 2 ವರ್ಷ ಕೆರೆಗಳಿಗೆ ನೀರು ಹರಿದಿದ್ದು, ಷಡಕ್ಷರಿ ಶಾಸಕರಾದ ಬಳಿಕ ನೀರು ಹರಿಸುವುದನ್ನು ಬಂದ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *