ಪುಸ್ತಕದಿಂದ ತೆಗೆದರೂ ಭಾರತೀಯರ ಹೃದಯದಲ್ಲಿ ಟಿಪ್ಪು ಸದಾ ನೆಲೆಸಿರುತ್ತಾರೆ: ಹೆಚ್.ವಿಶ್ವನಾಥ್

ಮೈಸೂರು: ಪುಸ್ತಕದಿಂದ ತೆಗೆದು ಹಾಕಿದರೂ ಟಿಪ್ಪು ಸುಲ್ತಾನ್ ಭಾರತೀಯರ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

`ಟೀಪೂ ಮಾನ್ಯತೆ ಸಿಗದ ಸುಲ್ತಾನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಟಿಪ್ಪು ಜಗತ್ತಿನ ಮಾನ್ಯತೆಗೆ ಒಳಗಾದ ಚಕ್ರವರ್ತಿ. ಕೇಸರಿಯನ್ನು ಒಂದು ಧರ್ಮದವರು, ಹಸಿರನ್ನು ಮತ್ತೊಂದು ಧರ್ಮದವರು ಕಿತ್ತುಕೊಂಡಿದ್ದಾರೆ. ಕಾಮಾಲೆ ಕಣ್ಣಿಂದ, ಮತಾಂಧತೆ ಕಣ್ಣಿನಿಂದ ಟಿಪ್ಪುವನ್ನು ನೋಡಬೇಡಿ ಟಿಪ್ಪು ಈ ನಾಡಿನ ಮಣ್ಣಿನ ಮಗ, ಮೈಸೂರು ಹುಲಿ ಟಿಪ್ಪು ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

tippu

ಟಿಪ್ಪು 80 ಸಾವಿರ ಕೊಡವರನ್ನು ಕೊಂದ ಎಂದು ಹೇಳುತ್ತಾರೆ. 250 ವರ್ಷದ ಹಿಂದೆ ಅಲ್ಲಿ ಅಷ್ಟು ಜನಸಂಖ್ಯೆ ಇತ್ತಾ? ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟಿಪ್ಪು ಯಾರಿಗೂ ತಲೆ ಬಾಗಿಲ್ಲ. ಯಾರ ಮುಂದೆಯೂ ಮಂಡಿಯೂರದ ಧೀರ. ಶತ್ರುವಿನ ಮುಂದೆ ಶರಣಾಗದ ಟಿಪ್ಪು ಜಗತ್ತಿನ ಏಕೈಕ ವೀರ ಬಣ್ಣಿಸಿದರು.

ನನ್ನ ಜೆಂಡಾ ಬದಲಾಗಿದೆ, ಆದರೆ ನನ್ನ ಅಜೆಂಡಾ ಮಾತ್ರ ಒಂದೇ. ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬಂದಾಗಲೂ ಇದನ್ನೇ ಹೇಳಿದ್ದೆ. ಈ ದೇಶದ ಎಲ್ಲಾ ಧರ್ಮ ಗುರುಗಳು ಯಾಕೆ ಮೌನವಾಗಿದ್ದೀರಾ? ಇವತ್ತಿನ ಸ್ಥಿತಿಯನ್ನು ಯಾಕೆ ಖಂಡಿಸುತ್ತಿಲ್ಲ. ಅನುದಾನದ ಕಾರಣಕ್ಕೆ ಸರ್ಕಾರದ ವಿರುದ್ಧ ಮಾತಾಡ್ತಿಲ್ವಾ? ಅನ್ನ ಕಿತ್ತುಕೊಳ್ಳುವ ಕೆಲಸ ರಾಜ್ಯದಲ್ಲಿ ನಡೆಯತ್ತಿದೆ. ಇದರ ವಿರುದ್ಧ ಯಾಕೆ ಧರ್ಮ ಗುರು ಮಾತಾಡ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಶೋಕಿ ಲೈಫ್ – ಸ್ವಂತ ಗಾಡಿಗೆ ಸರ್ಕಾರದ ಲೋಗೋ ಹಾಕಿ ಪ್ರವಾಸ

ಮಠಾಧೀಶರು ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮ ಮೌನ ಮುರಿಯಬೇಕು. ಭಾರತವನ್ನು ಸಮರ್ಥವಾಗಿ ಕಟ್ಟುವಲ್ಲಿ ಎಲ್ಲಾ ಧರ್ಮದ ಪಾತ್ರ ದೊಡ್ಡದಿದೆ. ಇದನ್ನು ಬೇರ್ಪಡಿಸುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *