ಟ್ರೆಂಡಿಂಗ್ ಆಯ್ತು ಕತ್ರೀನಾ, ಸಲ್ಮಾನ್ ಡ್ಯಾನ್ಸ್: ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ವ್ಯೂ ಆಯ್ತು ವಿಡಿಯೋ

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ’ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಯುಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಡ್ಯಾನ್ಸಿಂಗ್ ನಂಬರ್ ಶೈಲಿಯ ಈ ಹಾಡಿನಲ್ಲಿ ಕತ್ರೀನಾ ಕೈಫ್ ಜೊತೆ ಸಲ್ಮಾನ್ ಖಾನ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಸ್ವ್ಯಾಗ್ಸ್ ಸೇ ಸ್ವಾಗತ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ತಮ್ಮ ಸಿನಿಮಾಗೆ ಕ್ಯೂಟ್ ಜೋಡಿ ವೆಲ್ ಕಮ್ ಮಾಡಿದ್ದಾರೆ. ಕತ್ರೀನಾ ಎಂದಿನಂತೆ ತಮ್ಮ ಡ್ಯಾನ್ಸ್ ಮೂಲಕ ಹಾಡಿನ ಕೇಂದ್ರ ಬಿಂದುವಾಗಿದ್ದಾರೆ. ಇನ್ನೂ ಸಲ್ಮಾನ್ ತಮ್ಮ ಸಿಂಪಲ್ ಮತ್ತು ಸಿಗ್ನೇಚರ್ ಸ್ಟೆಪ್ ಗಳನ್ನು ಹಾಡಿನಲ್ಲಿ ನೋಡಬಹುದು. ಸುಂದರ ಬೆಟ್ಟದ ಬೀಚ್ ಬಳಿ ಹಾಡಿನ ಚಿತ್ರೀಕರಣ ನಡೆದಿದ್ದು, ಅತ್ಯಂತ ಕಲರ್ ಫುಲ್ ಆಗಿ ನೋಡುಗರನ್ನು ಸೆಳೆಯುತ್ತಿದೆ.

ಈ ಹಿಂದೆ ಏಕ್ ಥಾ ಟೈಗರ್ ಸಿನಿಮಾದಲ್ಲಿ `ಬಂಜಾರ್ ದಿಲ್ ಬಂಜಾರ್’ ಹಾಡು ಇದೇ ರೀತಿಯಲ್ಲಿ ಮೂಡಿ ಬಂದಿತ್ತು. ಬಂಜಾರ್ ಹಾಡಿನಲ್ಲಿಯೂ ಸಾಕಷ್ಟು ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿತ್ತು. ಸ್ವ್ಯಾಗ್ ಸೇ ಸ್ವಾಗತ್ ನಲ್ಲಿಯ ಡ್ಯಾನ್ಸ್ ಕೂಡ ಪಾಶ್ಚತ್ಯ ಶೈಲಿಯಲ್ಲಿ ಮೂಡಿ ಬಂದಿದೆ. ಹಾಡು ರಿಲೀಸ್ ಆದ 24 ಗಂಟೆಯಲ್ಲಿಯೇ ಸುಮಾರು 1 ಕೋಟಿಗಿಂತ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಸುಮಾರು 3 ಲಕ್ಷ 36 ಸಾವಿರ ಲೈಕ್‍ಗಳನ್ನು ಪಡೆದುಕೊಂಡು ಪ್ರೇಕ್ಷಕರಿಂದ ತುಂಬಾ ಮೆಚ್ಚುಗೆಯನ್ನು ಪಡೆದಿದೆ.

2012ರಲ್ಲಿ ತೆರೆಕಂಡಿದ್ದ ಬ್ಲಾಕ್ ಬಾಸ್ಟರ್ ಸಿನಿಮಾ `ಏಕ್ ಥಾ ಟೈಗರ್’ ಚಿತ್ರದ ಮುಂದುವರಿದ ಭಾಗವೇ ಈ ಸಿನಿಮಾ. ಉಗ್ರರು ಭಾರತದ 25 ಮಹಿಳಾ ನರ್ಸ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಉಗ್ರರ ಬಂಧನದಲ್ಲಿರುವ ಭಾರತೀಯ ಮಹಿಳಾ ನರ್ಸ್ ಗಳನ್ನು ಸ್ವದೇಶಕ್ಕೆ ಕರೆತರಲು ಭಾರತ ದೇಶ ಸಲ್ಮಾನ್ ಖಾನ್ (ಟೈಗರ್)ರನ್ನು ನೇಮಿಸುತ್ತದೆ. ಸಲ್ಮಾನ್ ಹೊಸ ಮಿಷನ್ ಗೆ ಕತ್ರೀನಾ (ಸೋಯಾ) ಕೂಡ ಸಾಥ್ ನೀಡುತ್ತಾರೆ. ಈ ಮಿಷನ್ ಬೇಧಿಸುವ ಕಥೆಯನ್ನು ಟೈಗರ್ ಜಿಂದಾ ಹೈ ಹೊಂದಿದೆ.

ದಾಖಲೆಗಳು ಇರೋದೇ ಅವುಗಳನ್ನು ಮುರಿಯೋದಕ್ಕೆ ಎಂಬ ಮಾತಿದೆ. ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಬಾಹುಬಲಿ-2 ಸಿನಿಮಾದ ದಾಖಲೆಯನ್ನು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ `ಟೈಗರ್ ಜಿಂದಾ ಹೈ’ ಸಿನಿಮಾದ ಟ್ರೇಲರ್ ಬ್ರೇಕ್ ಮಾಡಿತ್ತು. ವಿಶೇಷ ಪಾತ್ರದಲ್ಲಿ ಕನ್ನಡಿಗ ಗಿರೀಶ್ ಕಾರ್ನಾಡ್ ಸಹ ಕಾಣಿಸಿಕೊಂಡಿದ್ದಾರೆ. ಅಲಿ ಅಬ್ಬಾಸ್ ಜಫರ್ ನಿರ್ದೇಶನದಿಂದ ಮೂಡಿ ಬರುತ್ತಿರುವ ಈ ಟೈಗರ್ ಜಿಂದಾ ಹೈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ.

https://www.youtube.com/watch?v=RlicG9c1VKk

Comments

Leave a Reply

Your email address will not be published. Required fields are marked *