ಐಸಿಸ್ ಉಗ್ರರ ವಿರುದ್ಧ ಸಲ್ಮಾನ್ ಸೆಣಸಾಟ

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ` ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್‍ನಲ್ಲಿ ಆ್ಯಕ್ಷನ್ ಗಳಿಗೇನೂ ಕಡಿಮೆಯಿಲ್ಲ. ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ಬಾಲಿವುಡ್‍ನ ಫೇವರೇಟ್ ಫಿಲ್ಮ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

`ಏಕ್ ಥಾ ಟೈಗರ್’ ಸಿನಿಮಾ ನೋಡಿರುವ ಅಭಿಮಾನಿಗಳಿಗೆ `ಟೈಗರ್ ಜಿಂದಾ ಹೈ’ ಟ್ರೇಲರ್ ನಲ್ಲಿ ಕಥೆ ಅರ್ಥವಾಗುತ್ತದೆ. ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಇಬ್ಬರೂ ಭಾರತ ಹಾಗು ಪಾಕಿಸ್ತಾನ ರಾಷ್ಟ್ರಗಳ ಸಿಕ್ರೇಟ್ ಏಜೆಂಟ್ ಗಳಾಗಿರುತ್ತಾರೆ. ಒಂದು ಟಾಸ್ಕ್ ನಲ್ಲಿ ಇಬ್ಬರಿಗೂ ಲವ್ ಆಗುತ್ತದೆ. ಎರಡು ದೇಶಗಳ ವಿರೋಧದ ನಡುವೆಯೂ ಇಬ್ಬರೂ ತಮ್ಮ ತಮ್ಮ ದೇಶಗಳನ್ನು ತೊರೆದು ಬೇರೆ ದೇಶಗಳತ್ತ ಸಾಗುತ್ತಾರೆ. ನಂತರ ಭಾರತ ಮತ್ತು ಪಾಕಿಸ್ತಾನ ದೇಶಗಳ ಏಜೆಂಟ್‍ಗಳು ಇವರಿಬ್ಬರ ಬಂಧನಕ್ಕಾಗಿ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ ಇದೆಲ್ಲಾ ಏಕ್ ಥಾ ಟೈಗರ್ ಕಥೆ. ಈ ಸಿನಿಮಾದ ಮುಂದುವರೆದ ಭಾಗವೇ ಟೈಗರ್ ಜಿಂದಾ ಹೈ.

ಹೊಸ ಟ್ರೇಲರ್ ಸಾಕಷ್ಟು ಹೊಸತನವನ್ನು ಹೊಂದಿದ್ದು, ಪ್ರಚಲಿತ ವಿದ್ಯಮಾನಗಳೊಂದಿಗೆ ತುಳುಕು ಹಾಕಿಕೊಂಡಿದೆ. ಐಸಿಸ್ ಉಗ್ರರು ಭಾರತದ 25 ಮಹಿಳಾ ನರ್ಸ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಆದರೆ ಇಂತಹ ಕ್ರೂರತ್ವದ ವ್ಯಕ್ತಿಗಳಿಂದ ನಮ್ಮವರನ್ನು ಅವರಿಂದ ಕರೆತರಲು ಭಾರತ ದೇಶ ಸಲ್ಮಾನ್ ಖಾನ್ (ಟೈಗರ್)ರನ್ನು ನೇಮಿಸುತ್ತದೆ. ಸಲ್ಮಾನ್ ಹೊಸ ಮಿಷನ್ ಗೆ ಕತ್ರೀನಾ (ಸೋಯಾ) ಕೂಡ ಸಾಥ್ ನೀಡುತ್ತಾಳೆ. ಈ ಮಿಷನ್ ಬೇಧಿಸುವ ಕಥೆಯನ್ನು ಟೈಗರ್ ಜಿಂದಾ ಹೈ ಹೊಂದಿದೆ.

ಟ್ರೇಲರ್ ನಲ್ಲಿ ಮಧ್ಯೆ ಮಧ್ಯೆ ಪಂಚಿಂಗ್ ಡೈಲಾಗ್ ಗಳಿದ್ದು, ನೋಡುಗರಲ್ಲಿ ರೋಮಾಂಚನವನ್ನು ಉಂಟು ಮಾಡುತ್ತವೆ. ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್ ಸಹ ಕಾಣಿಸಿಕೊಂಡಿದ್ದಾರೆ. ಇತ್ತ ಟ್ರೇಲರ್ ನಲ್ಲಿ ಸಲ್ಮಾನ್ ಮತ್ತು ಕತ್ರಿನಾ ಆ್ಯಕ್ಷನ್ ಸೀನ್ ಗಳಲ್ಲಿ ಕಾಣಿಸುವುದರ ಜೊತೆಗೆ ರೊಮ್ಯಾಂಟಿಕ್ ಆಗಿಯೂ ಮಿಂಚಿದ್ದಾರೆ.

ಟೈಗರ್ ಜಿಂದಾ ಹೈ ಚಿತ್ರದ ಮೊದಲ ಲುಕ್ ನಲ್ಲಿ, `ನೋ ಒನ್ ಹಂಟ್ಸ್ ಉಡೆಂಡ್ ಟೈಗರ್’ (ಗಾಯವಾದ ಹುಲಿಯನ್ನು ಯಾರು ಬೇಟೆ ಆಡೋಕೆ ಆಗಲ್ಲ) ಎಂದು ಬರೆಯಲಾಗಿತ್ತು. ಅಲಿ ಅಬ್ಬಾಸ್ ಜಫರ್ ಟೈಗರ್ ಜಿಂದಾ ಹೈ ಚಿತ್ರಕ್ಕೆ ನಿರ್ದೇಶನವಿದೆ. ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ.

 

Comments

Leave a Reply

Your email address will not be published. Required fields are marked *