ಹಿಡಿದು ಮಾರಿಬಿಡಬಹುದೆಂಬ ಭಯಕ್ಕೆ ಹುಲಿ ಗುಹೆಯಲ್ಲಿ ಅಡಗಿರಬಹುದು: ಮೋದಿ ಸಫಾರಿಗೆ ಸಿದ್ದು ವ್ಯಂಗ್ಯ

ಬೆಂಗಳೂರು: ಮೋದಿ ಸಫಾರಿ ಕುರಿತು ವರದಿಯೊಂದನ್ನು ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಗಿ ಟ್ವೀಟ್ (Tweet) ಮಾಡಿದ್ದಾರೆ.

ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾನುವಾರ ಬಂಡೀಪುರಕ್ಕೆ (Bandipur) ಆಗಮಿಸಿದ್ದಾರೆ. ಈ ವೇಳೆ 22 ಕಿಲೋಮೀಟರ್ ಸಫಾರಿ (Safari) ನಡೆಸಿ ಬಂಡೀಪುರದ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆ ಮಾಡಿದರು. ಇದನ್ನು ಓದಿ: ದೇಶದಲ್ಲಿ ಇದೆ 3167 ಹುಲಿಗಳು – ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗ: ಮೋದಿ 

ಮೋದಿ ಸಫಾರಿ ವೇಳೆ ಹುಲಿ ಗೋಚರಿಸಲಿಲ್ಲ ಎಂದು ತಿಳಿಸುವ ಮಾಧ್ಯಮ ವರದಿಯನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.

ಹಿಡಿದು ಮಾರಿಬಿಡುತ್ತಾರೆ ಎನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕುಳಿತಿದೆಯೋ ಅಯ್ಯೋ ಪಾಪ. ಇನ್ನು ಕೆಲವೇ ದಿನಗಳಲ್ಲಿ ಬಂಡೀಪುರ ಉಳಿಸಿ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಎಂದು ಬರೆದು ನರೇಂದ್ರ ಮೋದಿಯವರಿಗೆ ಟ್ಯಾಗ್ (Tag) ಮಾಡಿದ್ದಾರೆ. ಇದನ್ನು ಓದಿ: ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು