ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗಣೇಶಗುಡಿ ಸಮೀಪ ಜಗಲಬೇಟಿ ರಸ್ತೆಯಲ್ಲಿ ವಾಹನ ಸವಾರರಿಗೆ ಹುಲಿಯೊಂದು ನಡುರಸ್ತೆಯಲ್ಲಿಯೇ ಪ್ರತ್ಯಕ್ಷವಾಗಿ ಭಯ ಹುಟ್ಟಿಸಿದೆ.
ರಮೇಶ್ ಎಂಬವರು ತಮ್ಮ ವಾಹನದಲ್ಲಿ ಹೋಗುವಾಗ ಹುಲಿಯನ್ನು ನೋಡಿದ್ದಾರೆ. ಹುಲಿ ನೋಡಿದ ತಕ್ಷಣ ಅವರು ತಮ್ಮ ವಾಹನ ನಿಲ್ಲಿಸಿ, ಮೊಬೈಲಿನಲ್ಲಿ ಅದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಶಿರಸಿ ವಿಭಾಗದ ದೇವನಮನೆ ಗಾಟ್‍ನ ಮತ್ತಿಗಟ್ಟದಲ್ಲಿ ಹೊಸ ಗದ್ದೆಯ ಮಂಜುಗೌಡ ಹಾಗೂ ಆಕೆಯ ಚಿಕ್ಕಮ್ಮ ಭದ್ರೆ ಕೃಷ್ಣಗೌಡ ಎಂಬವರ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಇದಾದ ಬಳಿಕ ಮತ್ತಿಗಟ್ಟದಲ್ಲಿ ದನವನ್ನು ಭಕ್ಷಿಸಿ ಎಲ್ಲರಲ್ಲೂ ಭಯ ಮೂಡಿಸಿತ್ತು.
ಈಗ ದಾಂಡೇಲಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ, ಭಯ ಹುಟ್ಟಿಸುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply