ಬೀಜಿಂಗ್: ಕಟ್ಟಡದ 2ನೇ ಮಹಡಿಯಿಂದ ಬೀಳುತ್ತಿದ್ದ ಕಂದನನ್ನು ರಕ್ಷಿಸಿರುವ ಘಟನೆ ಗುವಾಂಗ್ಡಾಂಗ್ ಪ್ರಾಂತ್ಯದ ಡಾಂಗ್ಗುವಾನ್ ಎಂಬಲ್ಲಿ ನಡೆದಿದೆ. ಮಗುವನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ.
ಯುವತಿಯೊಬ್ಬಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಎರಡನೇ ಮಹಡಿಯ ಬಾಲ್ಕನಿಯಲ್ಲಿ ಮಗು ನೇತಾಡುತ್ತಿರೋದನ್ನು ಗಮನಿಸಿದ್ದಾಳೆ. ಭಯಗೊಂಡ ಯುವತಿ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬನನ್ನು ಸಹಾಯಕ್ಕೆ ಕರೆದಿದ್ದಾಳೆ. ವ್ಯಕ್ತಿ ಕೂಡಲೇ ಅನತಿ ದೂರದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇನ್ನೇನು ಮಗು ಬೀಳುವಷ್ಟರಲ್ಲಿ ಯುವತಿ ಹಾಗೂ ವ್ಯಕ್ತಿ ರಸ್ತೆ ಬದಿ ಇರಿಸಿದ್ದ ಮ್ಯಾಟ್‍ನ್ನು ಹಿಡಿದುಕೊಂಡು ಕಂದನನ್ನ ರಕ್ಷಿಸಿದ್ದಾರೆ.

ಮಗು ರಕ್ಷಣೆಯ ಎಲ್ಲ ದೃಶ್ಯಗಳು ಮತ್ತೊಂದು ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಯುವತಿಯ ಸಮಯಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ರೆ, ಕಂದಮ್ಮನ ಪೋಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಸು ಎಂಬಲ್ಲಿ ಸೆಪ್ಟೆಂಬರ್ 7ರಂದು ಐದು ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 4ನೇ ಫ್ಲೋರ್ ಮನೆಯ ಕಿಟಕಿಯಿಂದ ಹೊರ ಬಿದ್ದು, ಎಸಿಯ ಕಂಡೆನ್ಸರ್ ಯೂನಿಟ್ ಮೇಲೆ ನೇತಾಡುತ್ತಿದ್ದಳು. ಸ್ಥಳದಲ್ಲಿ ಜನರು ಚೀರಾಡುತ್ತಿದ್ದಂತೆ ಯುವಕರಿಬ್ಬರು ಹಾಗೇ ನೇರವಾಗಿ ಏಣಿಯನ್ನು ಸಹ ಬಳಸದೇ ನೋಡ ನೋಡುತ್ತಿದ್ದಂತೆ ಕಟ್ಟಡವನ್ನು ಹತ್ತಿದ್ದರು. ಬಾಲಕಿಯ ಬಳಿ ತಲುಪಿದ ಇಬ್ಬರು ಆಕೆಯನ್ನು ರಕ್ಷಣೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply