ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!

ಬೆಳಗಾವಿ: ಮೂರು ಯುವತಿಯರು ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳದಲ್ಲಿ ನೆಲೆಸಿದ್ದ ಯುವತಿಯರ ಪತ್ತೆ ಕಾರ್ಯ ಆರಂಭವಾಗಿದೆ.

ಸದಾಶಿವ ನಗರದಲ್ಲಿರುವ ಸಮೃದ್ಧಿ ಸೇವಾ ಸಂಸ್ಥೆ ಸ್ಫೂರ್ತಿ ಸ್ವಾಧಾರ ಗೃಹ ಆಶ್ರಯದಲ್ಲಿದ್ದ ಮೇಘಾ ಮಲ್ಲಪ್ಪ ಹಳಬರ(22) ಯುವತಿ ನಾಪತ್ತೆ ಆಗಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ನಿವಾಸಿ ಮೇಘಾ ಹಳಬರ ಕಳೆದ ಜನವರಿ 22 ರಂದು ಬೆಳಗಿನ ಜಾವ ಯಾರಿಗೂ ಗೊತ್ತಾಗದಂತೆ ಕಂಪೌಡ್ ಹಾರಿ ನಾಪತ್ತೆ ಆಗಿದ್ದಾಳೆ. ಈ ಕುರಿತು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ನಗರದ ನಂದನಧಾಮದಲ್ಲಿದ್ದ ಎಚ್‍ಐವಿ ಪೀಡಿತರ ಕೇಂದ್ರದಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಮಂಜುಳಾ ರಾಜು(17) ನಾಪತ್ತೆ ಆಗಿದ್ದಾಳೆ. ಇದನ್ನೂ ಓದಿ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರಿಗೆ ದೊಣ್ಣೆಯಿಂದ ಥಳಿಸಿದ ಗ್ರಾಮಸ್ಥರು!

ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವುದಾಗಿ ಹೇಳಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭುವನೇಶ್ವರಿ ಅಜ್ಜನ್ನವರ(19) ನಾಪತ್ತೆ ಆಗಿದ್ದಾಳೆ. ನಾಪತ್ತೆಯಾದ ಯುವತಿಯ ಸುಳಿವು ಸಿಕ್ಕವರು ಕೂಡಲೇ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Comments

Leave a Reply

Your email address will not be published. Required fields are marked *