ಮೊಬೈಲ್ ಆನ್ ಮಾಡಿ ಕೊಳಕ್ಕೆ ಜಿಗಿದ್ರು-ನೀರಲ್ಲಿ ಬಿದ್ದ ಮೂವರು ಹೊರಗೆ ಬರಲೇ ಇಲ್ಲ-ವಿಡಿಯೋ ನೋಡಿ

ಜೈಪುರ: ಮೂವರು ಸ್ನೇಹಿತರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ರಾಜಸಮಂಡ್ ಜಿಲ್ಲೆಯ ದೇವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೇತನ್ ಖತೀಕ್ (24), ಸುದರ್ಶನ್ ಖತೀಕ್ (22) ಮತ್ತು ರಾಧೆಶ್ಯಾಮ್ ಸಾವನ್ನಪ್ಪಿದವರು ಒಳ್ಳೆಯ ಸ್ನೇಹಿತರು ಮತ್ತು ಸಂಬಂಧಿಗಳಾಗಿದ್ದರು. ಸಂಬಂಧಿಗಳಿಗಿಂತ ಒಳ್ಳೆಯ ಸ್ನೇಹಿತರಾಗಿದ್ದ ಮೂವರು ಏಕಕಾಲದಲ್ಲಿ ಸಾವನ್ನಪ್ಪಿದ್ದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಆಗಿದ್ದೇನು?
ಮೂವರು ಕೊಳ ಸ್ನಾನಕ್ಕೆ ತೆರಳಿದ್ದಾರೆ. ಮೂವರಲ್ಲಿ ಚೇತನ್ ತನ್ನ ಮೊಬೈಲ್ ವಿಡಿಯೋ ಆನ್ ಮಾಡಿ ಕೊಳಕ್ಕೆ ಜಿಗಿದಿದ್ದಾರೆ. ಕೊಳದಲ್ಲಿ ಜಿಗಿದ ಚೇತನ್ ಈಜಲು ಸಾಧ್ಯವಾಗದೇ ಮುಳಗಲು ಆರಂಭಿಸುತ್ತಿದ್ದಂತೆ, ಇನ್ನಿಬ್ಬರು (ರಾಧೆಶ್ಯಾಮ್ ಮತ್ತು ಸುದರ್ಶನ್) ಚೇತನ್ ನನ್ನು ಕಾಪಾಡಲು ಮುಂದಾಗಿದ್ದಾರೆ. ಒಟ್ಟಾಗಿ ಮೂವರು ಕೊಳದಲ್ಲಿ ಜಿಗಿದಿದ್ದರಿಂದ ಒಬ್ಬರನೊಬ್ಬರನ್ನು ರಕ್ಷಿಸಲು ಹೋಗಿ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.

ಸಾವನ್ನಪ್ಪಿದ ಮೂವರು ಸಂಬಂಧಿಗಳಾಗಿದ್ದು, ಮೂರು ನಿಮಿಷದ ಅವಧಿಯಲ್ಲಿ ಎಲ್ಲರೂ ನೀರಿನಲ್ಲಿ ಮುಳುಗಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ. ರಾಧೆಶ್ಯಾಮ್ ಮತ್ತು ಸುದರ್ಶನ್ ಇಬ್ಬರೂ ಕೊಳದಲ್ಲಿ ದಡದಲ್ಲಿದ್ರು. ಮುಳುಗುತ್ತಿದ್ದ ಚೇತನ್ ನನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಗೋಡಾರ ತಿಳಿಸಿದ್ದಾರೆ.

ಮೃತ ದೇಹಗಳನ್ನು ಕೊಳದಿಂದ ಹೊರತೆಗೆದು ಮರಣೋತ್ತರ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

https://www.youtube.com/watch?v=nCj6LUKUC4Q

Comments

Leave a Reply

Your email address will not be published. Required fields are marked *