ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಸಾವು

ಹೈದರಾಬಾದ್: ನೀರಿನಲ್ಲಿ ಮುಳುಗುತ್ತಿರುವ ಒಬ್ಬರನೊಬ್ಬರು ಪರಸ್ಪರ ಉಳಿಸಲು ಹೋಗಿ, ಒಂದೇ ಕುಟುಂಬದ ಮೂರು ತಲೆಮಾರುಗಳ ಪುರುಷರು ಸರೋವರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣಮೂರ್ತಿ (65), ಲಕ್ಕಿ (12), ನಾಗರಾಜು (35) ಮೃತರಾಗಿದ್ದಾರೆ. ನರಸಂಪೇಟೆ ಮಂಡಲದ ಚಿನ್ನ ಗುರಿಜಾಲ ಗ್ರಾಮದ ನಿವಾಸಿಗಳಾಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿರುವ ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಮೂವರು ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್ ಸ್ಟೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ 

ಕೃಷ್ಣಮೂರ್ತಿ ಕೆರೆಯಲ್ಲಿ ಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದರು. ಕೃಷ್ಣಮೂರ್ತಿ ಜೊತೆಯಲ್ಲಿದ್ದ ಅವರ ಮೊಮ್ಮಗ ಲಕ್ಕಿ ತಾತನನ್ನು ರಕ್ಷಿಸಲು ಕೆರೆಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ಮುಳುಗಲು ಪ್ರಾರಂಭಿಸಿದರು. ಸಮೀಪದಲ್ಲಿಯೇ ಇದ್ದ ಕೃಷ್ಣಮೂರ್ತಿ ಮಗ ನಾಗರಾಜು ತನ್ನ ತಂದೆ ಮತ್ತು ಮಗನನ್ನು ರಕ್ಷಿಸಲು ಸರೋವರಕ್ಕೆ ಹಾರಿದನು. ಮೂವರು ನೀರಿನ ಆಳಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

ಪೊಲೀಸರು ಗ್ರಾಮಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಸ್ಥರ ಪ್ರಕಾರ, ಅವರಲ್ಲಿ ಯಾರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *