ಒಂದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾವಿರಾರು ಜೋಡಿಗಳು

-ಸೋಮವಾರವೇ ಇಷ್ಟು ಮದ್ವೆಗಳು ನಡೆದಿದ್ದು ಏಕೆ ಗೊತ್ತಾ?

ನವದೆಹಲಿ: ಸೋಮವಾರ ಒಂದೇ ದಿನದಲ್ಲಿ ನಗರದಲ್ಲಿ ಅಂದಾಜು 5 ಸಾವಿರ ಜೋಡಿಗಳು ವಿವಾಹವಾಗಿ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಒಂದೇ ದಿನದಲ್ಲಿ ಇಷ್ಟೊಂದು ಮದುವೆ ನಡೆಯುತ್ತಾ ಅಂತಾ ಆಶ್ಚರ್ಯಾ ಅನ್ನಿಸುವುದು ಸಾಮಾನ್ಯ. ಹಿಂದೂ ಪೂರಾಣ ಹಾಗೂ ಜೋತಿಷ್ಯಿಗಳ ಪ್ರಕಾರ, ವಿವಾಹವಾಗಲು ಪ್ರತಿ ವರ್ಷ ಕೇವಲ 4 ಬಾರಿ ಮಾತ್ರ “ಅತ್ಯಂತ ಮಂಗಳಕರ” (ಶುಭ ದಿನ) ದಿನಗಳು ಬರುತ್ತದೆ. ಈ ದಿನಗಳಲ್ಲಿ ಮದುವೆಯಾದರೆ ದಂಪತಿಗಳು ಸುಖವಾಗಿ ಇರುತ್ತಾರೆ ಎಂಬುವುದು ಕೆಲವರ ನಂಬಿಕೆ. ವರ್ಷದಲ್ಲಿ ಬರುವ 4 “ಅತ್ಯಂತ ಮಂಗಳಕರ” ದಿನಗಳಲ್ಲಿ ಮೊದಲ ದಿನ ನವೆಂಬರ್ 19. ಆದರಿಂದ ಸೋಮವಾರದಂದು ದೆಹಲಿಯಲ್ಲಿ ಸುಮಾರು 5 ಸಾವಿರ ಜೋಡಿಗಳು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಸಾವಿರಾರು ಮದುವೆ ದಿಬ್ಬಣಗಳ ಅಬ್ಬರಕ್ಕೆ ದೆಹಲಿಯ ಹಲವು ರಸ್ತೆಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿತ್ತು. ಒಂದೆಡೆ ಜನರು ಮದುವೆಗಳ ಸಂಭ್ರಮಾಚಾರಣೆಯಲ್ಲಿ ಮುಳುಗಿದ್ದರೆ, ಇನ್ನೊಂದೆಡೆ ಈ ಸಂಭ್ರಮದಿಂದ ರಸ್ತೆಗಳಲ್ಲಿ ಉಂಟಾದ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡಿದ್ದಾರೆ.

ಮದುವೆ ದಿಬ್ಬಣ ಹಾಗೂ ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳಿಂದ ನಗರದ ಛತ್ತರ್‍ಪುರ್, ಮೆಹರೂಲಿ, ಜಿ.ಟಿ ಕರ್ನಲ್ ರಸ್ತೆ, ಅಲಿಪುರ್ ರಸ್ತೆ, ರಾಜಾ ಗಾರ್ಡನ್ ಇನ್ನೂ ಹಲವು ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಅದನ್ನು ಸರಿಪಡಿಸಲು ಸಂಚಾರಿ ಪೊಲೀಸರು ಗಂಟೆಗಟ್ಟಲೆ ಹರಸಾಹಸ ಪಟ್ಟರು.

ಮೊದಲ ಮಂಗಳಕರ ದಿನಕ್ಕೆ ವಾಹನ ಸವಾರರು ಹಾಗೂ ಪೊಲೀಸರು ಇಷ್ಟೊಂದು ಕಷ್ಟ ಪಡುವಂತಾಗಿದೆ. ಇನ್ನುಳಿದ ಮೂರು ಮಂಗಳಕರ ದಿನದಲ್ಲಿ ಇನ್ನೆಷ್ಟು ಕಷ್ಟಪಡಬೇಕೋ ಅಂತಾ ಯೋಚಿಸುವ ಮಟ್ಟಿಗೆ “ಅತ್ಯಂತ ಮಂಗಳಕರ” ದಿನಗಳು ದೆಹಲಿಯಲ್ಲಿ ಪರಿಣಾಮ ಬೀರಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *