ಬಾಣಂತಿ ದೇವಿ ಜಾತ್ರೆ- ಕೋವಿಡ್ ನಿಯಮ ಗಾಳಿಗೆ ತೂರಿದ ಭಕ್ತರು

ಕಾರವಾರ: ಕೋವಿಡ್ ನಿಯಮ ಗಾಳಿಗೆ ತೂರಿ, ವಿಕೇಂಡ್ ಕರ್ಫ್ಯೂನಲ್ಲೆ ವಿಜೃಂಭಣೆಯಿಂದ ಬಾಣಂತಿ ದೇವಿ ಜಾತ್ರೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಾಲಗಾಂವ ಗ್ರಾಮದಲ್ಲಿ ಇಂದು ನಡೆದಿದೆ.

ಮಕ್ಕಳಿಲ್ಲದ ಎಷ್ಟೋ ದಂಪತಿ ಹರಕೆ ಕಟ್ಟಿಕೊಳ್ಳುವುದು ಈ ಜಾತ್ರೆಯ ವಿಶೇಷ. ಮಕ್ಕಳಾದ ನಂತರದಲ್ಲಿ ಹರಕೆ ತೀರಿಸಲು ಕೆರೆ ನೀರಲ್ಲಿ ಮಗುವನ್ನುಅರ್ಧ ಮುಳುಗಿಸುವ ಪದ್ದತಿ ಈ ಜಾತ್ರೆಯ ವಿಶೇಷವಾಗಿದೆ. ತಾಲೂಕು ಆಡಳಿತ ಹಾಗೂ ಪೊಲೀಸ್‌ ಸಿಬ್ಬಂದಿ ಸೋಂಕಿನ ಕುರಿತಾಗಿ ಎಚ್ಚರಿಕೆ ನೀಡಿದರೂ ದೇವಸ್ಥಾನ ಆಡಳಿತ ಮಂಡಳಿ ಜಾತ್ರೆ ನಡೆಸಿದೆ. ಸಾಲಗಾಂವ ಗ್ರಾಮದ ಅಕ್ಕಪಕ್ಕದ ಹಳ್ಳಿ ಹಾಗೂ ಧಾರವಾಡ ,ಹುಬ್ಬಳ್ಳಿಯಿಂದ ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆ ಬಿಸಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೂ ಕೊರೊನಾ ದೃಢ

ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತು ನೀಡದ ದೇವಸ್ಥಾನ ಆಡಳಿತ ಮಂಡಳಿ: ಈಗಾಗಲೇ ಜಿಲ್ಲಾಡಳಿತ ಜಾತ್ರೆ ನಡೆಸಲು ನಿರ್ಬಂಧ ಹೇರಿದೆ. ಆದರೇ ಸಾಲಗಾಂವನಲ್ಲಿ ಆಡಳಿತ ಮಂಡಳಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಾತ್ರೆ ನಡೆಸುವ ಜೊತೆ ವಾಣಿಜ್ಯ ಮಳಿಗೆಗಳನ್ನು ಸಹ ತೆರೆದು ಸಾವಿರಾರು ಜನರು ಸೇರುವಂತೆ ಮಾಡಿದ್ದು, ಜನರು ಸಹ ವೀಕೆಂಡ್ ಕರ್ಫ್ಯೂ ಇದ್ದರೂ ಸಾವಿರಾರು ಜನ ಜಾತ್ರೆಗೆ ಜಮಾಯಿಸಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೂ ಕೊರೊನಾ ಪಾಸಿಟಿವ್

ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ವಿಫಲ: ವೀಕೆಂಡ್ ಕರ್ಫ್ಯೂ ಇದ್ದಿದ್ದರಿಂದ ಪೊಲೀಸರು ಆಯಾ ಕಟ್ಟಿನಲ್ಲಿ ಬ್ಯಾರಿಕೇಟ್ ಆಳವಡಿಸಿ ಬಂದೋಬಸ್ತ್ ಮಾಡಿದ್ದರು. ಆದರೆ ಕಠಿಣ ನಿಯಮ ಜಾರಿಗೆ ತರದ ಹಿನ್ನಲೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ಜಾತ್ರೆಗೆ ಆಗಮಿಸಿದ್ದರು. ಸದ್ಯ ಇಲಾಖೆ ಎಚ್ಚರಿಕೆ ನೀಡಿದ್ದನ್ನು ಹೊರತುಪಡಿಸಿದ್ರೆ ಈವರೆಗೂ ಪ್ರಕರಣ ದಾಖಲಿಸಿಲ್ಲ.

Comments

Leave a Reply

Your email address will not be published. Required fields are marked *