ಈ ತಾಯಿ ತನ್ನ ಮಗಳಿಗಾಗಿ ಮಾಡಿದ ತ್ಯಾಗಕ್ಕೆ ಮಹಿಳಾ ದಿನಾಚರಣೆಯಂದು ಸನ್ಮಾನ

ಬೆಂಗಳೂರು: ಇಂದು ಮಹಿಳಾ ದಿನಾಚರಣೆಯ ಸಂಭ್ರಮ. ಮಹಿಳೆಯರು ಅಷ್ಟು ಸಾಧನೆ ಮಾಡಿದ್ರು. ಇಷ್ಟು ಸಾಧನೆ ಮಾಡಿದ್ರು. ಅಲ್ಲಿ ಅನ್ಯಾಯಕ್ಕೆ ಒಳಗಾದ್ರು. ಇಲ್ಲಿ ಶೋಷಣೆಗೆ ಒಳಗಾದ್ರು ಅನ್ನೋ ವರದಿಗಳನ್ನು ಪ್ರತಿನಿತ್ಯ ಕೇಳ್ತೀವಿ. ಹೌದು. ಅಮ್ಮ ಮಕ್ಕಳಿಗೆ ಜೀವ ನೀಡ್ತಾಳೆ, ಬದುಕು ಕಟ್ಟಿಕೊಡುತ್ತಾಳೆ. ಆದ್ರೆ ಇಲ್ಲೊಬ್ಬರು ತಾಯಿ ಮಾತ್ರ ತನ್ನ ಪುಟ್ಟ ಕಂದಮ್ಮನ ಜೀವ ಉಳಿಸಲು ಹೋರಾಡಿದ ಕಥೆ ಕೇಳಿದ್ರೆ ಎಂತವರ ಕಣ್ಣಾಲಿಯೂ ಒದ್ದೆಯಾಗುತ್ತೆ.

ಒಡಿಸ್ಸಾ ಮೂಲದ ಪ್ರಿಯಾಂಕ ದಂಪತಿಗೆ ಹೆಣ್ಣು ಮಗು ಹುಟ್ಟಿದ ಕ್ಷಣ ಖುಷಿಯೋ ಖುಷಿಯಾಗಿತ್ತು. ಆ ಮಗುವಿಗೆ ಅರ್ಪಿತಾ ಅಂತಾ ಹೆಸರಿಟ್ಟಿದ್ದರು. ಆದ್ರೆ ಕಂದಮ್ಮನಿಗೆ ಹುಟ್ಟುತ್ತಲೇ ಕಿಡ್ನಿ ವೈಫಲ್ಯ. ದಾನಿಗಳಿಗೆ ಎಷ್ಟೇ ಅಲೆದಾಡಿದ್ರೂ ಯಾರು ಸಿಗಲಿಲ್ಲ. ಆಮೇಲೆ 30 ವರ್ಷದ ತಾಯಿ ಪ್ರಿಯಾಂಕ ಅವರೇ ಮಗಳಿಗೆ ಕಿಡ್ನಿ ದಾನ ಮಾಡಿ ಮರುಜೀವ ಕೊಟ್ಟಿದ್ದಾರೆ.

ಮಗಳು ಅತೀ ಸಣ್ಣ ವಯಸ್ಸಿನಲ್ಲೇ ಕಿಡ್ನಿ ವೈಫಲ್ಯಕ್ಕೆ ಒಳಗಾದ್ಳು. ಹೀಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆಕೆಗೆ ಕಿಡ್ನಿ ಅಗತ್ಯವಿದೆ ಅಂತಾ ವೈದ್ಯರು ಹೇಳಿದ್ರು. ಆದ್ರೆ ದಾನಿಗಳಿಗಾಗಿ ಸಾಕಷ್ಟು ಹುಡುಕಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಬೇರೆ ವಿಧಿಯಲ್ಲದೇ ನನ್ನ ಮಗಳನ್ನು ಉಳಿಸಿಕೊಳ್ಳಲು ನಾನೇ ಕಿಡ್ನಿ ನೀಡಿದೆ. ಸದ್ಯ ಖುಷಿಯಿಂದ ಜೀವನ ಸಾಗುತ್ತಿದೆ ಅಂತಾ ತಾಯಿ ಪ್ರಿಯಾಂಕಾ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು.

ಇದೀಗ ಮಹಿಳಾ ದಿನಚಾರಣೆಯ ಅಂಗವಾಗಿ ತಾಯಿಯ ಈ ಮಹಾನ್ ಕಾರ್ಯವನ್ನು ಗುರುತಿಸಿ ರೈನ್ ಬೋ ಆಸ್ಪತ್ರೆಯವರು ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *