ಯುಗಾದಿಗೆ ನಿಮಗೆ ಸರ್ಪ್ರೈಸ್ ಕಾದಿದೆ: ಪ್ರಿಯಾ ಸುದೀಪ್

ಬೆಂಗಳೂರು: ಯುಗಾದಿ ಹಬ್ಬಕ್ಕೆ ನಿಮ್ಮಗೆಲ್ಲಾ ಸರ್ಪ್ರೈಸ್ ಕಾದಿದೆ ಎಂದು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡುವುದರ ಮೂಲಕ ಎಲ್ಲರಿಗೂ ಕುತೂಹಲ ಮೂಡಿಸಿದ್ದಾರೆ.

ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಕಿಚ್ಚ ಸುದೀಪ್ ಅವರ ಫೋಟೋ ಹಾಕಿ ಅದರಲ್ಲಿ ಯುಗಾದಿ Bonanza. ಈ ಯುಗಾದಿ ಹಬ್ಬದಂದು ಎಲ್ಲ ಸುದೀಪ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಕಾದಿದೆ ಎಂದು ಟ್ವೀಟ್ ಮಾಡಿದ್ದಾರೆ. ಯುಗಾದಿ ಹಬ್ಬಕ್ಕೆ ನನ್ನ ಎಲ್ಲಾ ಸ್ನೇಹಿತರಿಗೂ ಒಂದು ಗಿಫ್ಟ್ ಕಾದಿದೆ ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್ ನೋಡಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಕೆಲವರು ನಾವು ಸರ್ಪ್ರೈಸ್ ಗಾಗಿ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದರೆ, ಮತ್ತೆ ಕೆಲವರು ಯುಗಾದಿ ಹಬ್ಬದವರೆಗೂ ನಮಗೆ ಕಾಯಲು ಆಗುವುದಿಲ್ಲ. ಈಗಲೇ ಹೇಳಿ ಎಂದು ರೀ-ಟ್ವೀಟ್ ಮಾಡಿದ್ದಾರೆ.

ಮತ್ತೆ ಕೆಲವರು ಏನಿರಬಹುದು? ಬಿಲ್ಲಾರಂಗಭಾಷಾ ಫಸ್ಟ್ ಲುಕ್, ಪೈಲ್ವಾನ್ ಬಿಡುಗಡೆ ದಿನಾಂಕ, ಕೋಟಿಗೊಬ್ಬ- 3 ಚಿತ್ರದ ಬಗ್ಗೆ ಅಥವಾ ಹೊಸ ಚಿತ್ರನಾ ಎಂದು ವೋಟ್ ಮಾಡಿ ಜನರನ್ನು ಪ್ರಶ್ನಿಸಿದ್ದಾರೆ. ಅಬ್ಬಬ್ಬಾ ಹಬ್ಬ ಈಗಲೇ ಶುರು ಆಗಿದೆ. ಬಿಲ್ಲಾನಾ ರಂಗಾನಾ ಭಾಷಾನಾ. ಪೈಲ್ವಾನ್ ಇರಬಹುದು. ನಾನು ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸುದೀಪ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರ ಅಲ್ಲದೇ ಅವರು ಟಾಲಿವುಡ್ ಹಾಗೂ ಬಾಲಿವುಡ್‍ನಲ್ಲೂ ಬ್ಯುಸಿಯಿದ್ದಾರೆ.

Comments

Leave a Reply

Your email address will not be published. Required fields are marked *