ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

ಮುಂಬೈ: ಮದುವೆಗಳಿಗೆ ತೆರಳಿದಾಗ ವೇದಿಕೆ ಮೇಲಿರುವ ದಂಪತಿಗೆ ಅತಿಥಿಗಳು ಕಾಣಿಕೆ ನೀಡುವುದು ಸಾಮನ್ಯವಾಗಿ ಕಂಡುಬರುತ್ತದೆ. ಮದುವೆಗೆ ಆಗಮಿಸಿರುವ ಅತಿಥಿಗಳು ಸಹ ದಂಪತಿಗಳಿಗೆ ಗೃಹಪಯೋಗಿ ವಸ್ತುಗಳು, ಬೆಲೆಬಾಳುವ ಒಡವೆಗಳು, ಅಲಂಕಾರಿಕ ವಸ್ತುಗಳು ಅಥವಾ ತುಂಬಾ ಹತ್ತಿರದವರು ಆಗಿದ್ದರೆ ಚಿನ್ನಾಭರಣಗಳನ್ನು ನೀಡುತ್ತಾರೆ. ಮತ್ತೆ ಕೆಲವರು ಯಾವ ಕಾಣಿಕೆ ನೀಡಬೇಕೆಂದು ತಲೆ ಕೆಡಿಸಿಕೊಳ್ಳದೇ ಕವರ್‍ನಲ್ಲಿ ತಮಗೆ ತೋಚಿದಷ್ಟು ಹಣವಿಟ್ಟು ದಂಪತಿಗೆ ನೀಡುತ್ತಾರೆ.

ಮಹಾರಾಷ್ಟ್ರದ ನವಜೋಡಿಯೊಂದು ಮದುವೆಗೆ ಆಗಮಿಸುವ ಅತಿಥಿಗಳಿಗೆ ಕಾಣಿಕೆ ರೂಪದಲ್ಲಿ ಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಜೋಡಿಯ ಆಸೆಯಂತೆ ಅತಿಥಿಗಳೆಲ್ಲಾ ಸುಮಾರು 3 ಸಾವಿರ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಅಮರ್ ಮತ್ತು ರಾಣಿ ಕಲ್ಮಾಕರ್ ಪುಸ್ತಕಗಳನ್ನು ಕಾಣಿಕೆಯಾಗಿ ಪಡೆದ ದಂಪತಿ. ವರ ಅಮರ್ 15 ವರ್ಷಗಳಿಂದ ಯುವ ಚೇತನ ಎಂಬ ಎನ್‍ಜಿಓ ಮುಖಾಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ವಧು ರಾಣಿ ಪುಣೆಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆಗೂ ಮುನ್ನ ತಮ್ಮ ಎಲ್ಲ ಗೆಳೆಯ ಹಾಗು ಸಂಬಂಧಿಕರಿಗೂ ವಾಟ್ಸಪ್ ಮುಖಾಂತರ ಉಡುಗೊರೆ ರೂಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ನೀಡಬೇಕೆಂದು ತಿಳಿಸಿದ್ದರು.

ಪುಸ್ತಕಗಳು ಯಾಕೆ?: ಮದುವೆಯಲ್ಲಿ ಬರುವ ಪುಸ್ತಕಗಳಿಂದ ಗೃಂಥಾಲಯ ತೆರಯಲು ಅಮರ್ ಮತ್ತು ರಾಣಿ ನಿರ್ಧರಿಸಿದ್ದರು. ಬಹಳಷ್ಟು ಮಂದಿ ಅತಿಥಿಗಳು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದು, ಅಹ್ಮದ್ ನಗರದಲ್ಲಿ ದಂಪತಿ ಗ್ರಂಥಾಲಯವನ್ನು ತೆರೆಯುವ ಪ್ರಯತ್ನದಲ್ಲಿದ್ದಾರೆ. ಹಿಂದುಳಿದ ವರ್ಗದ ಮಕ್ಕಳು ಹಾಗೂ ಶೈಕ್ಷಣಿಕ ಸಂಪನ್ಮೂಲಗಳು ದೊರೆಯದ ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗವನ್ನು ಪಡೆಯಬಹುದಾಗಿದೆ. ಈ ತಿಂಗಳ ಕೊನೆಯಲ್ಲಿ ಗ್ರಂಥಾಲಯವನ್ನು ತೆರೆಯಲಾಗುತ್ತದೆ.

Comments

Leave a Reply

Your email address will not be published. Required fields are marked *