ಬೆಳಗ್ಗೆ ಶಿಕ್ಷಕ ಸಂಜೆ ಭಿಕ್ಷುಕ- ಕುಡಿಯೋದಕ್ಕೆ ಮಾರ್ಕೆಟ್, ಬಸ್ ಸ್ಟ್ಯಾಂಡ್‍ನಲ್ಲಿ ಭಿಕ್ಷಾಟನೆ ಮಾಡೋ ಕುಡುಕ ಅಧ್ಯಾಪಕ

ತುಮಕೂರು: ನಿಜವಾಗ್ಲೂ ಇದು ಶಿಕ್ಷಕ ಸಮುದಾಯವೇ ತಲೆತಗ್ಗಿಸುವ ಸ್ಟೋರಿ. ಕುಡಿತಕ್ಕೆ ದಾಸನಾದ ಶಿಕ್ಷಕ ಭಿಕ್ಷಾಟನೆ ಮಾಡ್ತಿರೋ ವಿಲಕ್ಷಣ ಘಟನೆ ಇದು.

ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಶಿಕ್ಷಕ ನಾಗೇಂದ್ರಪ್ಪ ಎಣ್ಣೆ ಹೊಡೆಯಲು ಹಣಕ್ಕಾಗಿ ಭಿಕ್ಷಾಟನೆ ಮಾಡುತ್ತಿದ್ದಾನೆ. ಕುಮಾರಲಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕನಾದ ಈತ ದಿನನಿತ್ಯ ಕುಡಿದುಕೊಂಡೇ ಶಾಲೆಗೆ ಹೋಗ್ತಾನೆ. ನಶೆಯಲ್ಲೇ ಪಾಠ ಮಾಡ್ತಾನೆ. ಕುಡಿಯಲು ಹಣ ಇಲ್ಲದೇ ಇದ್ದಾಗ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಾನೆ.

ಶುಕ್ರವಾರ ರಾತ್ರಿ ಬಸ್ ನಿಲ್ದಾಣದಲ್ಲೇ ಮಲಗಿದ್ದ ನಾಗೇಂದ್ರ, ಬನಿಯನ್ ಮತ್ತು ಟವಲ್ ಸುತ್ತುಕೊಂಡು ಬಸ್ ನಿಲ್ದಾಣದಲ್ಲಿ ಭಿಕ್ಷೆ ಎತ್ತುತ್ತಿದ್ದ. ಕನಕಲುಬಂಡಿ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾಗ ಅಮಾನತುಗೊಂಡಿದ್ದ. ಆದರೂ ಬುದ್ಧಿ ಕಲಿಯದ ಈತ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾನೆ.

Comments

Leave a Reply

Your email address will not be published. Required fields are marked *