ಹೈದರಾಬಾದ್: ಅಪಹರಣಕ್ಕೊಳಗಾಗಿದ್ದ ನಾಲ್ಕು ತಿಂಗಳ ಮಗುವನ್ನು 15 ಗಂಟೆಯೊಳಗೆ ನಗರದ ಸಿಟಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ನಾಂಪಲ್ಲಿಯಲ್ಲಿ ಪಾದಚಾರಿ ಮಾರ್ಗದಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ 4 ತಿಂಗಳ ಫೈಝಾನ್ ಖಾನ್ ಎಂಬ ಗಂಡು ಮಗುವನ್ನು ಅಪಹರಣ ಮಾಡಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರನ್ನು ಟ್ರ್ಯಾಕ್ ಮಾಡಿ ಆರೋಪಿಗಳಾದ ಮುಷ್ತಾಕ್ ಮತ್ತು ಮೊಹಮ್ಮದ್ ಯೂಸುಫ್‍ನನ್ನು ಬಂಧಿಸಿದ್ದಾರೆ. ಮಗುವನ್ನ ಪೋಷಕರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಮಗುವನ್ನು ಎತ್ತಿಕೊಂಡಿರುವ ಫೋಟೋಗಳನ್ನು ಹೆಚ್ಚುವರಿ ಕಮಿಷನರ್ ಸ್ವಾತಿ ಲಕ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 14 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಫೋಟೋದಲ್ಲಿ 4 ತಿಂಗಳ ಮಗು ಮುದ್ದಾಗಿ ನಗುತ್ತಿದ್ದು, ಅದರ ಜೊತೆ ಪೊಲೀಸರು ಕೂಡ ನಗುತ್ತಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
https://twitter.com/AddlCPCrimesHyd/status/916685135885377536
Nampally police arrested 2 child kidnappers MD Mustaq & MD Yousuf n Traced 4 months baby boy with in 15 hours and handed over to parents pic.twitter.com/tmKegzBOkG
— SHO NAMPALLY (@shonampally) October 5, 2017



Leave a Reply