ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಬಜೆಟ್ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದ್ರು.

ಬಿಜೆಪಿ ಸರ್ಕಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಡಬ್ಬಲ್ ಎಂಜಿನ್ ಸರ್ಕಾರ ಅಂತಿದ್ರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಅಭಿವೃದ್ಧಿ ಅಂತಿದ್ರು. ಆದರೆ ಡಬ್ಬಲ್ ಎಂಜಿನ್ ಸರ್ಕಾರ ಏನ್ ಮಾಡ್ತಿದೆ..? ಇದು ಡಬ್ಬಲ್ ಎಂಜಿನ್ ಸರ್ಕಾರ ಅಲ್ಲ, ಇದೊಂದು ಡಬ್ಬಾ ಸರ್ಕಾರ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

ಜನಪ್ರತಿನಿಧಿಗಳಾದ ನಾವೆಲ್ಲ ಜನರಿಂದ ಆಯ್ಕೆಯಾಗಿದ್ದೇವೆ. ಕರ್ನಾಟಕದ ಜನಸಂಖ್ಯೆ 6 ಕೋಟಿ 66 ಲಕ್ಷ ಆಗಿದೆ. ಈ ಜನರಿಗೆ ನಾವು ಉತ್ತರದಾಯಿಗಳು. ಪ್ರಜಾಪ್ರಭುತ್ವದಲ್ಲಿ ಜನರ ಮುಂದೆ ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಬಜೆಟ್ ಮಂಡಿಸುವಾಗ ಏನನ್ನೂ ಮುಚ್ಚಿಡಬಾರದು. ಮುಚ್ಚಿಡೋದು ಸರ್ವಾಧಿಕಾರ, ಬಿಚ್ಚಿಡೋದು ಪ್ರಜಾಪ್ರಭುತ್ವ ಎಂದು ಟೀಕಿಸಿದರು.
ಮುಖ್ಯಮಂತ್ರಿಯಾಗಿ 6 ಬಜೆಟ್ ಮಂಡಿಸಿದ್ದೇನೆ. ಒಟ್ಟು 13 ಬಜೆಟ್ ಮಂಡಿಸಿದ್ದೇನೆ. ನನ್ನ ಬಜೆಟ್ ಪುಸ್ತಕ ತೆಗೆದು ನೋಡಿ, ಪ್ರತಿ ಇಲಾಖೆಯಲ್ಲಿ ಏನು ಭರವಸೆ ನೀಡಿದ್ದೆ. ಅದನ್ನು ಈಡೇರಿಸಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದಾಗ ಇಲಾಖಾವಾರು ಬಿಟ್ಟು 6 ವಲಯಗಳನ್ನು ಮಾಡಿದರು ಎಂದು ಕಿಡಿಕಾರಿದರು.

2 ವರ್ಷ ಯಡಿಯೂರಪ್ಪ ಅವರು ವಲಯವಾರು ಬಜೆಟ್ ಮಂಡಿಸಿದ್ದರು. ಈಗ ಬೊಮ್ಮಾಯಿ ಕೂಡ ಅದನ್ನೇ ಪಾಲಿಸಿ 6 ವಲಯಗಳನ್ನಾಗಿ ಮಾಡಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಹಣ ಜನರ ತೆರಿಗೆ ಹಣ, ಜನರ ಬೆವರಿನ ಹಣ. ಜನರು ಹಣವನ್ನು ಖರ್ಚು ಮಾಡುವಾಗ ನಾವೆಲ್ಲ ಜನರ ಟ್ರಸ್ಟಿ. ಆದ್ರೆ ಈ ಬಜೆಟ್ ನಲ್ಲಿ ಎಲ್ಲ ಮುಚ್ಚಿಟ್ಟಿದ್ದಾರೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಮಾತುಕತೆಯ ಮೂಲಕ ಯುದ್ಧ ನಿಲ್ಲಿಸಿ – ಝೆಲೆನ್ಸ್ಕಿಗೆ ಮೋದಿ ಸಲಹೆ
ಇದೊಂದು ಜನರ ನಿರೀಕ್ಷೆಗೆ ವಿರುದ್ಧವಾದ ಬಜೆಟ್. ಅಭಿವೃದ್ಧಿ, ಬೆಳವಣಿಗೆ, ಮುನ್ನೋಟ ಇಲ್ಲದ ಬಜೆಟ್ ಅಂತಾ ವಾಗ್ದಾಳಿ ನಡೆಸಿದರು.

Leave a Reply