ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

ಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಈಗಾಗಲೇ ಒಬ್ಬ ಬಾಯ್ ಫ್ರೆಂಡ್ ಬಿಟ್ಟು, ಕಲಾವಿದ ಶಂತನು ಜೊತೆ ಡೇಟಿಂಗ್ ನಲ್ಲಿದ್ದರು. ಆದರೆ, ಅವರದ್ದು ಕೇಲವ ಡೇಟಿಂಗ್ ಅಲ್ಲವಂತೆ. ಶಂತನು ಜೊತೆ ಶ್ರುತಿ ಮದುವೆ ಕೂಡ ಮಾಡಿಕೊಂಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಶ್ರುತಿ ಬಾಯ್ ಫ್ರೆಂಡ್ ಶಂತನು ಮಾಧ್ಯಮವೊಂದರ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

“ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ಒಂದೇ ರೀತಿ ಆಲೋಚನೆ ಮಾಡುತ್ತೇವೆ. ಪರಸ್ಪರ ಗೌರವ ಕೊಟ್ಟುಕೊಂಡು ಬದುಕು ನಡೆಸುತ್ತಿದ್ದೇವೆ. ನಮ್ಮ ವಿವಾಹವು ನಮ್ಮಿಬ್ಬರ ಸಂಬಂಧವನ್ನು ಗಟ್ಟಿಗೊಳಿಸಿದೆ. ಅದೊಂದು ರೀತಿಯಲ್ಲಿ ಹೊಸ ರೀತಿಯ ವಿವಾಹ. ಹೌದು, ನಾವಿಬ್ಬರೂ ಮದುವೆ ಆಗಿದ್ದೇವೆ’ ಎಂದು ಹೇಳುವ ಮೂಲಕ ಈವರೆಗೂ ಮುಚ್ಚಿಟ್ಟದ ವಿವಾಹದ ಸಂಬಂಧವನ್ನು ಶಂತನು ಬಹಿರಂಗ ಪಡಿಸಿದ್ದಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

ಈ ಹಿಂದೆ ಶ್ರುತಿ ಹಾಸನ್, ಮೈಕಲ್ ಕೊರ್ಸಲೆ ಜತೆ ಡೇಟಿಂಗ್ ನಲ್ಲಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಲಾಸ್ ಏಂಜಲೀಸ್ ನಲ್ಲಿದ್ದ ಮೈಕಲ್ ತನ್ನ ಹುಡುಗಿಯನ್ನು ನೋಡುವುದಕ್ಕಾಗಿ ಅದೆಷ್ಟೋ ಬಾರಿ ಭಾರತಕ್ಕೆ ಬಂದಿದ್ದು ಇದೆ. ಶ್ರುತಿ ಕೂಡ ಲಾಸ್ ಏಂಜಲೀಸ್ ಗೆ ಹೋಗುತ್ತಿದ್ದರು. ಆನಂತರ ಸ್ವತಃ ಶ್ರುತಿಯೇ ಬ್ರೇಕ್ ಅಪ್ ಮಾಡಿಕೊಂಡರು ಎಂದು ಸುದ್ದಿ ಆಯಿತು. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

ಮೈಕಲ್ ಜತೆಗಿನ ಬ್ರೇಕ್ ಆದ ನಂತರ ಶ್ರುತಿ ಖಿನ್ನತೆಗೆ ಒಳಗಾಗಿದ್ದರು. ಅದರಿಂದ ಆಚೆ ಬರಲು ಅವರಿಗೆ ತುಂಬಾ ಸಮಯ ಬೇಕಾಯಿತು. ಖಿನ್ನತೆಯಿಂದ ಆಚೆ ಬಂದ ನಂತರ ಈಗ ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದರು ಎಂದು ನಂಬಲಾಗಿತ್ತು. ಆದರೆ, ಈ ಜೋಡಿ ವಿವಾಹವೇ ಆಗಿದೆ ಎನ್ನುವುದು ಲೆಟೆಸ್ಟ್ ಸುದ್ದಿ.

Comments

Leave a Reply

Your email address will not be published. Required fields are marked *