65ನೇ ವಯಸ್ಸಿನಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಿದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್!

ನವದೆಹಲಿ: ಮಾಜಿ ಕ್ರಿಕೆಟಿಗ, ಪಾಕಿಸ್ತಾನ ತೆಹ್ರೀಕ್-ಇನ್ಸಾಪ್ (ಪಿಟಿಐ) ಪಕ್ಷದ ಮುಖ್ಯಸ್ಥ 65 ವರ್ಷದ ಇಮ್ರಾನ್ ಖಾನ್ ಭಾನುವಾರ ಮೂರನೇ ಮದುವೆ ಆಗುವ ಮೂಲಕ ಎಲ್ಲರನ್ನು ದಿಗ್ಬ್ರಮೆಗೊಳಿಸಿದ್ದಾರೆ.

ಇಮ್ರಾನ್ ರಿಗೆ ಆಧ್ಯಾತ್ಮಿಕ ಸಲಹೆಗಳನ್ನು ನೀಡುತ್ತಿದ್ದ ಬುಶರಾ ಮನೇಕಾ ಅವರನ್ನೇ ಮದುವೆಯಾಗಿದ್ದಾರೆ. ಬುಶರಾ ಅವರನ್ನು `ಪಿಂಕಿ ಪೀರ್’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಲಾಹೋರ್ ನಲ್ಲಿರುವ ಬುಶರಾ ಅವರ ಸಹೋದರನ ಮನೆಯಲ್ಲಿ ಮದುವೆ ನಡೆದಿದೆ. ಪಿಟಿಐ ಪಕ್ಷದ ಸದಸ್ಯರಾಗಿರುವ ಮುಫ್ತಿ ಮೊಹಮ್ಮದ್ ಸೈಯದ್ ಅವರು ಇಬ್ಬರ ಮದುವೆಯನ್ನು ಮಾಡಿಸಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಇಮ್ರಾನ್ ಸಹೋದರಿಯ ಗೈರಾಗಿದ್ದರು. ಕಾರಣ ಇಮ್ರಾನ್ ಮದುವೆಯನ್ನು ಗೌಪ್ಯವಾಗಿ ಇರಿಸಲಾಗಿತ್ತು ಎಂದು ಹೇಳಲಾಗಿದೆ.

ಯಾರು ಈ ಬುಶರಾ ಮನೇಕಾ?: ಇಮ್ರಾನ್ ಖಾನ್ ಧರ್ಮಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಿದ್ರು. ಈ ಹಿಂದೆ ನೀವು ಮೂರನೇ ಮದುವೆಯಾದ್ರೆ ಅದು ನಿಮ್ಮ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಮದುವೆಯ ನಂತರ ನೀವು ಪಾಕಿಸ್ತಾನದ ಪ್ರಧಾನ ಮಂತ್ರಿಯೂ ಆಗಲಿದ್ದೀರಿ ಎಂದು ಭವಿಷ್ಯ ನುಡಿದಿದ್ದರು. ಬುಶರಾ ಈ ಮೊದಲೇ ಮದುವೆಯಾಗಿದ್ದು, 5 ಮಕ್ಕಳ ತಾಯಿಯಾಗಿದ್ದಾರೆ. ಬುಶರಾ ಲಾಹೋರ್ ನಿಂದ 250 ಕಿಮೀ ದೂರದಲ್ಲಿರುವ ಪಾಕಪಟನಾ ಜಿಲ್ಲೆಯ ನಿವಾಸಿಯಾಗಿದ್ದಾರೆ.

1995ರಲ್ಲಿ ಇಮ್ರಾನ್ ಖಾನ್ ಜೆಮಿಯಾ ಖಾನ್‍ರನ್ನು ವಿವಾಹವಾಗಿದ್ದರು. 9 ವರ್ಷಗಳ ನಂತರ 2004ರಲ್ಲಿ ಇಮ್ರಾನ್ ಖಾನ್ ಮತ್ತು ಜೆಮಿಯಾ ವಿಚ್ಚೇಧನವನ್ನು ಪಡೆದುಕೊಂಡಿದ್ದರು. ಇಮ್ರನಾ ಮತ್ತು ಜೆಮಿಯಾರಿಗೆ ಇಬ್ಬರು ಗಂಡು ಮಕ್ಕಳನ್ನು ಸಹ ಹೊಂದಿದ್ದಾರೆ. 2015ರಲ್ಲಿ ಟಿವಿ ನಿರೂಪಕಿಯಾಗಿದ್ದ ರೆಹಮ್ ಖಾನ್ ಎಂಬವರನ್ನು ಮದುವೆ ಆಗಿದ್ದರು. ಆದ್ರೆ ಕೇವಲ 10 ತಿಂಗಳಿಗೆ ಇಬ್ಬರ ಸಂಬಂಧ ಮರಿದು ಬಿದ್ದಿತ್ತು.

https://twitter.com/MunazaHassan/status/965289782921383937

Comments

Leave a Reply

Your email address will not be published. Required fields are marked *