ಲಿಂಬಾವಳಿ, ರಾಮದಾಸ್‌ಗೆ ಟಿಕೆಟ್‌ ಮಿಸ್‌- ಬಿಜೆಪಿಯ10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಬಿಜೆಪಿಯ (BJP) ಮೂರನೇ ಪಟ್ಟಿ ಘೋಷಣೆಯಾಗಿದ್ದು ರಾಮದಾಸ್‌ (Ramdas) ಮತ್ತು ಅರವಿಂದ ಲಿಂಬಾವಳಿಗೆ (Aravind Limbavali) ಟಿಕೆಟ್‌ ಮಿಸ್‌ ಆಗಿದೆ.

ಮಹಾದೇವಪುರದಿಂದ ಲಿಂಬಾವಳಿ ಪತ್ನಿ ಮಂಜುಳಾಗೆ ಟಿಕೆಟ್‌ ಸಿಕ್ಕಿದರೆ , ಹೆಬ್ಬಾಳದಿಂದ ಕಟ್ಟಾ ಸುಬ್ರಹ್ಮಣ್ಯ ಬದಲು ಕಟ್ಟಾ ಉಮೇಶ್‌ಗೆ ಟಿಕೆಟ್‌ ಘೋಷಣೆಯಾಗಿದೆ. ಜಗದೀಶ್‌ ಶೆಟ್ಟರ್‌ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಮಹೇಶ್‌ ಟೆಂಗಿನಕಾಯಿಗೆ ಟಿಕೆಟ್‌ ನೀಡಲಾಗಿದೆ.

 

ಸೋಮಣ್ಣ ಪ್ರತಿನಿಧಿಸುತ್ತಿದ್ದ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್‌ ಉಮೇಶ್‌ ಶೆಟ್ಟಿಗೆ ಸಿಕ್ಕಿದೆ. ಇಂದಿನ ಪಟ್ಟಿಯಲ್ಲಿ ಮಾನ್ವಿ ಮತ್ತು ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ಇನ್ನೂ ಘೋಷಣೆಯಾಗಿಲ್ಲ.

ಯಾವ ಕ್ಷೇತ್ರದಿಂದ ಯಾರು?
ನಾಗಠಾಣ – ಸಂಜೀವ್ ಐಹೊಳೆ
ಸೇಡಂ – ರಾಜಕುಮಾರ್ ಪಾಟೀಲ್
ಕೊಪ್ಪಳ – ಮಂಜುನಾಥ್ ಅಂಬರೀಶ್
ರೋಣ – ಕಳಕಪ್ಪ ಬಂಡಿ
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
ಹಗರಿಬೊಮ್ಮನಹಳ್ಳಿ – ಬಿ ರಾಮಣ್ಣ
ಹೆಬ್ಬಾಳ – ಕಟ್ಟ ಜಗದೀಶ್
ಗೋವಿಂದರಾಜನಗರ – ಉಮೇಶ್‍ಶೆಟ್ಟಿ
ಮಹದೇವಪುರ – ಮಂಜುಳ ಅರವಿಂದ ಲಿಂಬಾವಳಿ
ಕೃಷ್ಣರಾಜ- ಶ್ರೀವತ್ಸ