– 40 ಐಫೋನ್ ಸೇರಿ 110 ಫೋನ್ ವಶ
ಬೆಂಗಳೂರು: ಐಫೋನ್ (iPhone) ಅಂದರೇನೇ ಒಂಥರಾ ಬ್ರ‍್ಯಾಂಡ್. ಕೆಲವರು ಕಷ್ಟನೊ, ಸುಖನೊ ಹೇಗೋ ಒಂದು ಐಫೋನ್ ತೆಗೆದುಕೊಂಡಿರುತ್ತಾರೆ. ಆದರೆ ಈ ಐಫೋನ್‌ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖತರ್ನಾಕ್ ಟೀಂ ಒಂದು ಅರೆಸ್ಟ್ (Arrest) ಆಗಿದೆ.
ಬಂಧಿತ ಕಳ್ಳರಿಂದ (Thieves) ಬರೋಬ್ಬರಿ 40 ಐಪೋನ್ ಸೇರಿ ಒಟ್ಟು 110 ಪೋನ್‌ಗಳನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ ನಡೆಯುತ್ತಿದ್ದ ಮೊಬೈಲ್ ರಾಬರಿ ಗ್ಯಾಂಗ್‌ನಲ್ಲಿ ಇವರದ್ದೂ ಸಹ ಎತ್ತಿದ ಕೈ. ಡಿಸಿಪಿ ಶ್ರೀನಿವಾಸ್ ಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್, ಪಿಎಸ್‌ಐ ಪ್ರಕಾಶ್ ಹಾಗೂ ಕ್ರೈಂ ತಂಡದಿಂದ ಕಾರ್ಯಾಚರಣೆ ನಡೆಸಿ ಕಳ್ಳರಾದ ಮಹಮ್ಮದ್ ಸಕ್ಲೈನ್, ಸುಹೇಲ್, ಸಾಕೀಬ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆಗಳು
ಬಂಧಿತರೆಲ್ಲರೂ ಬೆಂಗಳೂರಿನ ಗೋರಿಪಾಳ್ಯ ನಿವಾಸಿಗಳಾಗದ್ದು, ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್



Leave a Reply