GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ

ಕಾರವಾರ: ಉದ್ಯಮಿಯೊಬ್ಬರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ 50 ಲಕ್ಷ ಹಣ ದೋಚಿದ್ದ ಪ್ರಕರಣವನ್ನು ಶಿರಸಿ ಠಾಣೆ ಪೊಲೀಸರು ಭೇದಿಸಿದ್ದು, 9 ದರೋಡೆಕೋರರನ್ನು ಬಂಧಿಸಿ ಅವರಿಂದ 13.82 ಲಕ್ಷ ಹಣ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರು, 12 ಮೊಬೈಲ್ ಮತ್ತು ಜಿಪಿಎಸ್‌ ಟ್ರ್ಯಾಕರ್ ವಶಕ್ಕೆ ಪಡೆಯಲಾಗಿದೆ.

ಸಿದ್ದಾಪುರ ತಾಲ್ಲೂಕು ನೆಜ್ಜೂರು ಗ್ರಾಮದ ಜಾವೇದ್ ಖಾನ್ ಎಂಬವರು ಇಬ್ಬರು ಸಂಬಂಧಿಕರೊಂದಿಗೆ ಬೆಳಗಾವಿಯಿಂದ ವಾಪಸ್ಸಾಗುವ ವೇಳೆ ದರೋಡೆಕೋರರು ಅಡ್ಡಗಟ್ಟಿ ಹಣ ದೋಚಿದ್ದರು. ಆರೋಪಿತರಾದ ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಧರ ನಗರದ ಆಸಿಫ್ ಅಬ್ದುಲ್ ಸತ್ತಾರ (29), ಅಬ್ದುಲ್ ಸತ್ತಾರ (32), ಮನ್ಸೂರ್ ಅಲಿಯಾಸ್ ಮಹಮದ್ ಜಾಫರ್ ಖಾನ್ (31), ಸಿದ್ದಾಪುರ ತಾಲ್ಲೂಕು ನೆಜ್ಜೂರಿನ ಅಜಿಮುಲ್ಲಾ ಅನ್ಸರ್ ಸಾಬ್ (29), ಭಟ್ಕಳ ಬದ್ರಿಯಾ ಕಾಲೋನಿಯ ಅಬ್ದುಲ್ ರೆಹಮಾನ್ ವಟರಾಗ (30), ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಮೇಲಿನ‌ ಪೇಟೆಯ ರಿಯಾಜ್ ಫಯಾಜ್ (32), ಕೊಪ್ಪ ತಾಲ್ಲೂಕು ನೇತಾಜಿ ನಗರದವರಾದ ವಿಶ್ವನಾಥ ವಾಸು ಶೆಟ್ಟಿ (41), ಮನೋಹರ ಆನಂದ ಶೆಟ್ಟಿ (36), ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬಾಳೆಬೈಲ್‌ನ ಇಕ್ಬಾಲ್ ಅಬ್ದುಲ್ ಕೆ. (40) ಬಂಧಿತರು. ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

ಉದ್ಯಮಿ ಜಾವೇದ್ ಹಣಕಾಸು ವ್ಯವಹಾರ ಅರಿತಿದ್ದ ಆಸೀಫ್ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಭೂಮಿ ಖರೀದಿಗೆ ಬೆಳಗಾವಿಗೆ ತೆರಳುವುದನ್ನು ಅರಿತಿದ್ದರಿಂದ ವಾಹನಕ್ಕೆ ಜಿಪಿಎಸ್‌ ಟ್ರ್ಯಾಕರ್ ಅಳವಡಿಸಿದ್ದ. ನಿರಂತರವಾಗಿ ಟ್ರ್ಯಾಕರ್ ಮೂಲಕ ಚಲನವಲನ ಗಮನಿಸುತ್ತಿದ್ದ ಈತ ಸಹಚರರ ಜೊತೆ ಸೇರಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ್ದ ಎಂದು ತನಿಖೆಯ ನೇತೃತ್ವ ವಹಿಸಿದ್ದ ಡಿಎಸ್ಪಿ ರವಿ ನಾಯ್ಕ ಮಾಹಿತಿ ನೀಡಿದ್ದಾರೆ.

ಪ್ರಕರಣ ಭೇದಿಸುವಲ್ಲಿ ಸಿಪಿಐ ರಾಮಚಂದ್ರ ನಾಯಕ, ಎಸ್ಐಗಳಾದ ಹನುಮಂತ ಬಿರಾದಾರ, ಭೀಮಾಶಂಕರ ಸಿನ್ನೂರು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *