ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

ಮುಂಬೈ: ಜೆಸಿಬಿಯನ್ನೇ ನುಗ್ಗಿಸಿ ದರೋಡೆಕೋರರು ಎಟಿಎಂ ಎಗರಿಸಿಕೊಂಡು ಹೋಗಲು ವಿಫಲ ಯತ್ನ ನಡೆಸಿದ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅರಗ್ ಎಂಬಲ್ಲಿ ಈ ಘಟನೆ ನಡೆದಿದೆ. ಜೆಸಿಬಿಯಿಂದ ಎಟಿಎಂ ಕಳವುಗೈಯುತ್ತಿರುವ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಸ್ವಾಮೀಜಿಗೆ ಜಾಮೀನು

ವೀಡಿಯೋದಲ್ಲಿ ರಾತ್ರಿ ವೇಳೆ ದರೋಡೆಕೋರರು ಜೆಸಿಬಿಯನ್ನು ಎಟಿಎಂ ಕೇಂದ್ರಕ್ಕೆ ನುಗ್ಗಿಸಿದ್ದಾರೆ. ನಂತರ ಎಟಿಎಂ ಮೆಷಿನ್ ಅನ್ನು ಜೆಸಿಬಿಯಿಂದ ಎಳೆದಿದ್ದಾರೆ. ಈ ವೇಳೆ ಆದ ಸದ್ದಿನಿಂದ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಗಾಬರಿಗೊಂಡ ಖದೀಮರು ಎಟಿಎಂ ಬಿಟ್ಟು ಜೆಸಿಬಿ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗ್ರಾಮಸ್ಥರ ಮಾಹಿತಿ ಅಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆವರೆಗೆ ಕಾದು ನೋಡಿ..- ಆಪರೇಷನ್ ಕಮಲ ಸುಳಿವು ಕೊಟ್ಟ ಕಟೀಲ್

 

Comments

Leave a Reply

Your email address will not be published. Required fields are marked *