ಪೋಷಕರೇ ಎಚ್ಚರ.. ಮನೆಯಲ್ಲೇ ಮಕ್ಕಳು ಮಾಡ್ತಾರೆ ಕಳ್ಳತನ!

– ಬಳ್ಳಾರಿಯಲ್ಲಿ ಡೇಂಜರಸ್ ಗ್ಯಾಂಗ್ ಅರೆಸ್ಟ್

ಬಳ್ಳಾರಿ: ನಿಮ್ಮ ಮಕ್ಕಳು ನಿಮ್ಮ ಮನೆಯಲ್ಲೇ ಕಳ್ಳತನ ಮಾಡ್ತಿದ್ದಾರೆ ಅಂದ್ರೆ ಯಾವ ಪೋಷಕರೂ ಕೂಡ ನಂಬಲ್ಲ. ಆದ್ರೆ ಬಳ್ಳಾರಿಯಲ್ಲಿ ಶಾಲಾ ಮಕ್ಕಳು ಕಳ್ಳತನಕ್ಕೆ ಇಳಿದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು. ಬಳ್ಳಾರಿಯ ಮಿಲ್ಲರ್‍ಪೇಟೆಯಲ್ಲಿ ಡೇಂಜರ್ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ. ಈ ಗ್ಯಾಂಗ್ ಶಾಲಾ ಮಕ್ಕಳನ್ನ ಬೆದರಿಸಿ ಕಳ್ಳತನ ಮಾಡಿಸ್ತಾ ಇರೋ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳ ಜೊತೆ ಮೊದ ಮೊದಲು ಸ್ನೇಹ ಬೆಳೆಸೋ ಈ ಗ್ಯಾಂಗ್ ನ ಸದಸ್ಯರು ನಂತರ ಆ ಮಕ್ಕಳನ್ನ ಬೆದರಿಸ್ತಾರೆ. ಕೊಲೆ ಮಾಡೋ ಬೆದರಿಕೆ ಹಾಕಿ ಮನೆಯಲ್ಲಿ ಕಳ್ಳತನ ಮಾಡಿಸ್ತಾರೆ.


ಯಾವ ರೀತಿ ಮಕ್ಕಳನ್ನು ಬಳಸಿಕೊಳ್ಳುತ್ತಾರೆ..?
ಮೊದಲ ಶಾಲಾ ಮಕ್ಕಳ ಜೊತೆ ಸ್ನೇಹ ಬೆಳೆಸುತ್ತಾರೆ. ನಂತರ ಮನೆಯಲ್ಲಿ ಕದಿಯಲು ಹೇಳುತ್ತಾರೆ. ಕದಿಯಲು ಒಪ್ಪದಿದ್ರೆ ನೀನು ಗಾಂಜಾ ಸೇದುತ್ತಿಯಾ ಅಂತ ಮನೆಯಲ್ಲಿ ಹೇಳುತ್ತೇನೆ ಎಂದು ಬೆದರಿಕೆ ಹಾಕಲಾಗುತ್ತದೆ. ಅಲ್ಲದೇ ಚಾಕು ತೋರಿಸಿ ಕೊಲೆ ಮಾಡುವುದಾಗಿ ಭಯ ಹುಟ್ಟಿಸುತ್ತಾರೆ. ಮಕ್ಕಳು ಹಣ ಇದೆ ಎಂದು ಮನೆ ಬಳಿ ವಿಷಲ್ ಹಾಕ್ತಾರೆ. ನಂತರ ಮನೆಯ ಬಳಿ ಗ್ಯಾಂಗ್ ಬಂದು ಹಣ ಪಡೆದು ಹೋಗುತ್ತಾರೆ.

ಬಳ್ಳಾರಿಯ ಖಾಸಗಿ ಶಾಲೆಯ 30ಕ್ಕೂ ಹೆಚ್ಚು ಮಕ್ಕಳು ಈ ಗ್ಯಾಂಗ್ ಸೆಳೆತಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದ್ದಾರೆ. ಲಡ್ಡುಬಾ ಅಲಿಯಾಸ್ ಮುನ್ನಾಭಾಯಿ ಹಾಗೂ ಮಾಲ್ ಗಡಿ ಎನ್ನುವ ರೌಡಿಗಳೇ ಈ ಗ್ಯಾಂಗ್‍ನ ಪ್ರಮುಖರು. ಇವರೇ ಮಕ್ಕಳ ಜೊತೆ ಸ್ನೇಹ ಬೆಳಸಿ, ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಈ ಡೇಂಜರ್ ಗ್ಯಾಂಗನ ದುಷ್ಕೃತ್ಯಕ್ಕೆ ಬೆದರಿರೋ ಪೋಷಕರು ಇದೀಗ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದೂವರೆಗೂ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮಕ್ಕಳ ಕಳ್ಳತನದ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದ ಪೋಷಕರು, ಇದೀಗ ತಮ್ಮ ಮಕ್ಕಳೇ ಕಳ್ಳತನ ಮಾಡ್ತಾ ಇರೋದನ್ನ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಡೇಂಜರ್ ಗ್ಯಾಂಗ್‍ನ ಲಡ್ಡುಬಾ ಅಲಿಯಾಸ್ ಮುನ್ನಾಭಾಯಿ ಹಾಗೂ ಮಾಲ್ ಗಡಿ ಎನ್ನುವ ರೌಡಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವ ಬಳ್ಳಾರಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆದ್ರೆ ಈ ರೌಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡರೇ ಮಾತ್ರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಆ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ಕಾರ್ಯನಿರ್ವಹಿಸಲಿ ಅನ್ನೋದೇ ನೊಂದ ಪೋಷಕರ ಮನವಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *