ಹೈಫೈ ಡ್ರೆಸ್‍ನಲ್ಲಿ ಬಂದು ಕ್ಷಣಮಾತ್ರದಲ್ಲೇ ಚಿನ್ನಾಭರಣ ಎಗರಿಸ್ತಾರೆ ಕಳ್ಳಿಯರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ವಲ್ಪ ಯಾಮಾರಿದ್ರೂ ಚಿನ್ನಾಭರಣ ಮಂಗಮಾಯ ಆಗತ್ತೆ. ನಾಲ್ವರು ಹೈಫೈ ಕಳ್ಳಿಯರ ಜೊತೆ ವೃದ್ಧೆಯರ ಚಿನ್ನಕ್ಕೆ ಕನ್ನ ಹಾಕ್ತಿದ್ದ ಮತ್ತೊಬ್ಬ ಖದೀಮ ಅಂದರ್ ಆಗಿದ್ದಾನೆ.

ಬೆಂಗಳೂರಿನ ಜಯನಗರ ಬಳಿಯಿರೋ ಅಂಬಟಿ ಜ್ಯುವೆಲ್ಲರಿ ಶಾಪ್ ಗೆ ಇದೇ ತಿಂಗಳ 8ರಂದು ನಾಲ್ವರು ಹೈಫೈ ಯುವತಿಯರು ಬಂದು ಚಿನ್ನದ ಮೂಗುತಿಯ ಹೊಸ ಡಿಸೈನ್ ಇದ್ರೆ ತೋರಿಸಿ ಅಂತ ಕೇಳಿದ್ದಾರೆ. ಶಾಪ್‍ನಲ್ಲಿದ್ದ ಸಿಬ್ಬಂದಿ ಒಡವೆ ತೋರಿಸುವಾಗ ಅವ್ರ ಗಮನ ಬೇರೆಡೆ ಸೆಳೆದು, 4 ಚಿನ್ನದ ಬಳೆಗಳನ್ನು ಕಳ್ಳರು ಎಗರಿಸಿದ್ದಾರೆ. ಇದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಿರಾತಕಿಯರಿಗಾಗಿ ಖಾಕಿ ಪಡೆ ಫೀಲ್ಡಿಗಿಳಿದಿದೆ.


ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರ ಪಾಲಿಗೆ ಅಕ್ಷರಶಃ ವಿಲನ್ ಆಗಿದ್ದ ಮತ್ತೋರ್ವ ಕಳ್ಳ ಸುಹೇಲ್ ಅಲಿಯಾಸ್ ಕಾಣ ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ. ಆರೇಳು ತಿಂಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಈತ ಕೊನೆಗೂ ಖಾಕಿ ಖೆಡ್ಡಾಗೆ ಬಿದ್ದಿದ್ದಾನೆ.

ಮೈಸೂರು ಜೈಲು ಪಾಲಾದಾಗ ಇಮ್ರಾನ್ ಅಲಿಯಾಸ್ ಬಚ್ಚನ್ ಬಳಿ ಸುಹೇಲ್, ಸರಗಳ್ಳತನದ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಸದ್ಯ ಸುಹೇಲ್‍ನನ್ನು ವಶಕ್ಕೆ ಪಡೆದ ಪೊಲೀಸರು 11 ಲಕ್ಷ ಮೌಲ್ಯದ 326 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

https://youtu.be/xX9Sdu1paZI

Comments

Leave a Reply

Your email address will not be published. Required fields are marked *