ಕುಖ್ಯಾತ ಕಳ್ಳ ಅಂದರ್ – 33 ಲಕ್ಷ ರೂ. ಮೌಲ್ಯದ 9 ಕ್ಯಾಮೆರಾ ವಶ

ಬೆಂಗಳೂರು: ಯಾವ ಮನೆಗೂ ಕನ್ನ ಹಾಕದೆ ಕೂತಲ್ಲೆ ಲಕ್ಷಗಟ್ಟಲೇ ಹಣ ಲೂಟಿ ಹೊಡೆಯುತ್ತಿದ್ದು, ಜೂಜಿಗೆ ಪಾಗಲ್ ಆಗಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಶ್ವಕ್ ಖಾನ್ ಬಂಧಿತ ಆರೋಪಿ. ಈತ ಆನ್‍ಲೈನ್‍ನಲ್ಲಿ ಬೆಲೆಬಾಳುವ ಕ್ಯಾಮೆರಾಗಳನ್ನ ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಖರ್ತನಾಕ್ ಕಳ್ಳ. ಈತ ಜಸ್ಟ್ ಡಯಲ್‍ನ ಮೂಲಕ ಆನ್‍ಲೈನ್‍ನಲ್ಲಿ ಕ್ಯಾಮೆರಾಗಳನ್ನ ಬಾಡಿಗೆಗೆ ನೀಡುವ ಸ್ಟುಡಿಯೋದವರ ನಂಬರ್ ಪಡೆದುಕೊಂಡಿದ್ದನು. ನಂತರ ನಕಲಿ ಅಡ್ರೆಸ್‍ಪ್ರೂಫ್ ನೀಡಿ ಕ್ಯಾಮೆರಾಗಳನ್ನ ಬಾಡಿಗೆಗೆ ಪಡಿಯುತ್ತಿದ್ದನು. ಆದರೆ ಅದನ್ನ ಹಿಂದಿರುಗಿಸದೇ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗುತ್ತಿದ್ದ. ಸದ್ಯ ಆರೋಪಿಯನ್ನ ಬಂಧಿಸಿ ಸುಮಾರು 33 ಲಕ್ಷ ಬೆಲೆಬಾಳುವ 9 ಕ್ಯಾಮೆರಾಗಳನ್ನ ವಶಪಡಿಸಿಕೊಳ್ಳುವಲ್ಲಿ ಹೈಗ್ರೌಂಡ್ಸ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮೋಸ ಹೋಗಿದ್ದ ಮನೋಹರ್ ಹೇಳಿದ್ದಾರೆ.

ಬೆಲೆಬಾಳುವ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಆರೋಪಿ ಅವುಗಳನ್ನ ಅರ್ಧಬೆಲೆಗೆ ಒಎಲ್‍ಎಕ್ಸ್ ನಲ್ಲಿ ಮಾರಾಟ ಮಾಡಿ ಹಣ ಪಡಿಯುತ್ತಿದ್ದ. ದ್ವಿತೀಯ ಪಿಯುಸಿ ಫೇಲ್ ಆಗಿದ್ದ ಈತ ಯಾವುದೇ ಕೆಲಸ ಕಾರ್ಯ ಮಾಡದೇ ಜೂಜಿಗೆ ದಾಸನಾಗಿದ್ದನು. ಕ್ಯಾಮೆರಾ ಮಾರಾಟ ಮಾಡಿ ಬಂದ ಹಣದಲ್ಲಿ ಬೆಂಗಳೂರಿನಿಂದ ಮುಂಬೈಗೆ ಫ್ಲೈಟ್‍ನಲ್ಲಿ ತೆರಳಿ ಜೂಜಾಡಿ ಬಂದ ಹಣದಲ್ಲಿ ಮಜಾ ಉಡಾಯಿಸುತ್ತಿದ್ದನು. ಜೂಜಾಡಲು ಹಣವಿಲ್ಲದ್ದಕ್ಕೆ ಈ ಕಾರ್ಯಕ್ಕೆ ಇಳಿದೆ ಅಂತ ವಿಚಾರಣೆ ವೇಳೆ ಬಾಯುಬಿಟ್ಟಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ದೇವರಾಜು ತಿಳಿಸಿದ್ದಾರೆ.

ಸದ್ಯ ಬಂಧಿತ ಆರೋಪಿ ವಿರುದ್ಧ ಹೈಗ್ರೌಂಡ್ಸ್, ವಿಜಯನಗರ, ಬನಶಂಕರಿ, ಜಯನಗರ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 7 ವಂಚನೆ ಪ್ರಕರಣಗಳು ಬಯಲಾಗಿದೆ. ಪೊಲೀಸರು ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *